HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ 'ತುಡರ್'

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ತುಡರ್’

ತೇಜಸ್ ಪೂಜಾರಿ ಹಾಗೂ ಎಲ್ಟನ್ ಮಸ್ಕರೇನ್ಹಸ್ ಜಂಟಿಯಾಗಿ ನಿರ್ದೇಶನ ಮಾಡಿರುವ ‘ತುಡರ್’ ಎಂಬ ಹಾಸ್ಯಮಯ ತುಳು ಚಿತ್ರ ನಿನ್ನೆ ಬಿಡುಗಡೆಯಾಗಿದ್ದು,  ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯುವ ಕಲಾವಿದರ ಅದ್ಭುತ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ

ಈ ಚಿತ್ರವನ್ನು ವಿಲ್ಸನ್ ರೆಬೆಲ್ಲೊ ನಿರ್ಮಾಣ ಮಾಡಿದ್ದು, ಹರೀಶ್ ಶೆಟ್ಟಿ ಹಾಗೂ ವಿದ್ಯಾ ಸಂಪತ್ ಸಹ ನಿರ್ಮಾಪಕರಾಗಿದ್ದಾರೆ. ಸಿದ್ಧಾರ್ಥ್ ಶೆಟ್ಟಿ ಸೇರಿದಂತೆ ದೀಕ್ಷಾ ಭಿಸೆ, ಅರವಿಂದ್ ಬೋಳಾರ್, ಎಲ್ಟನ್ ಮಸ್ಕರೇನ್ಹಸ್, ಮೋಹನ್ ಎಸ್. ಅಮೀನ್, ರೂಪ ವರ್ಕಾಡಿ, ಪ್ರಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ, ನಮಿತಾ ಕುಲೋರ್, ಉದಯ್ ಪೂಜಾರಿ, ವಿಕಾಸ್ ಪುತ್ರನ್, ರಾದೇಶ್ ಶೆಣೈ, ಅಶೋಕ್ ಬಿ, ಉಮೇಶ್ ಮಿಜಾರ್ ಬಣ್ಣ ಹಚ್ಚಿದ್ದಾರೆ. ಗಣೇಶ್ ನೇರ್ಚಾತ್ ಸಂಕಲನ, ಮೋಹನ್ ರಾಜ್ ಸಂಭಾಷಣೆ, ತೇಜಸ್ ಪೂಜಾರಿ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular