HomeLatest Newsಗಿಡಗಳನ್ನು ಕಾಡುವ ಹುಳುಗಳ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ

ಗಿಡಗಳನ್ನು ಕಾಡುವ ಹುಳುಗಳ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ

ಮನೆಯಲ್ಲಿಯೇ ಹಣ್ಣು, ತರಕಾರಿ ಅಥವಾ ಹೂವಿನ ಗಿಡ ಬೆಳೆಸಿದ್ದೀರಾ..? ಅದಕ್ಕೆ ಹುಳುಗಳ ಕಾಟ ಶುರುವಾಗಿದೆಯಾ…? ಹಾಗಿದ್ರೆ ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಹಾಕುವುದರಿಂದ ಹುಳುಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಮನೆಯಲ್ಲಿ ಮೊಟ್ಟೆ ತಂದು ಉಪಯೋಗಿಸುತ್ತೀರಿ. ಅದರ ಸಿಪ್ಪೆಯನ್ನು ಹಾಗೆಯೇ ಕಸದ ಡಬ್ಬಿಗೆ ಎಸೆಯುವ ಬದಲು ಅದನ್ನು ಪುಡಿ ಮಾಡಿ ಇಟ್ಟುಕೊಂಡರೆ ಅದರಿಂದ ಈ ಹುಳುಗಳ ಕಾಟಕ್ಕೆ ಗುಡ್ ಬೈ ಹೇಳಬಹುದು. ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ ನೋಡಿ.

ತಿನ್ನುವುದಕ್ಕೆಂದೋ ಅಥವಾ ತಲೆಕೂದಲಿನ ಕಾಳಜಿಗೆಂದೋ ಮೊಟ್ಟೆ ಉಪಯೋಗಿಸಿರುತ್ತೀರಿ. ಅದನ್ನು ಒಡೆದ ಮೇಲೆ ಅದರ ಸಿಪ್ಪೆಯಲ್ಲಿ ಯಾವುದೇ ರೀತಿಯ ಲೋಳೆ ಇರದಂತೆ ಒಮ್ಮೆ ನೀರಿನಲ್ಲಿ ತೊಳೆಯಿರಿ. ಹಾಗೇ ಒಂದು ಪೇಪರ್ ಮೇಲೆ ಈ ಸಿಪ್ಪೆಗಳನ್ನೆಲ್ಲಾ ಹಾಕಿ ಅದನ್ನು ಒಣಗುವುದಕ್ಕೆ ಬಿಡಿ. 3 ದಿನಗಳ ಕಾಲ ಇದು ಹಾಗೆಯೇ ಒಣಗಲಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಇದನ್ನು ಒಂದು ಬ್ಲೆಂಡರ್ ಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ನೇರವಾಗಿ ಗಿಡದ ಮೇಲೆ ಇರುವ ಹುಳುಗಳ ಮೇಲೆ ಹಾಕಬಹುದು. ಹಾಗೇ ಸ್ವಲ್ಪ ಸ್ವಲ್ಪ ಪುಡಿಯನ್ನು ಗಿಡದ ಬುಡದ ಸುತ್ತ ಮುತ್ತ ಹಾಕಿ. ಇದರಿಂದ ಹುಳು ಹಿಡಿಯುವುದು ತಪ್ಪುತ್ತದೆ. ಉಳಿದ ಪುಡಿಯನ್ನು ಸ್ಟೋರ್ ಮಾಡಿಟ್ಟುಕೊಂಡು ಬೇಕಾದಾಗ ಉಪಯೋಗಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular