HomeKarnatakaರಸ್ತೆ ಮಧ್ಯೆಯೇ ಹೊತ್ತಿ ಉರಿದ ಟ್ರಕ್; ಕ್ಷಣಾರ್ಧದಲ್ಲಿ ಪಾರಾದ ಚಾಲಕ

ರಸ್ತೆ ಮಧ್ಯೆಯೇ ಹೊತ್ತಿ ಉರಿದ ಟ್ರಕ್; ಕ್ಷಣಾರ್ಧದಲ್ಲಿ ಪಾರಾದ ಚಾಲಕ

ವಿಜಯನಗರ: ಚಲಿಸುತ್ತಿದ್ದ ಟ್ರಕ್ ಇದ್ದಕ್ಕಿದ್ದಂತೆಯೇ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿ ಬಳಿಯ ಎಂ.ಬಿ.ಅಯ್ಯನಹಳ್ಳಿ ಬಳಿ ನಡೆದಿದೆ.

ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ ಸಾಗುತ್ತಿದ್ದ ಪಾರ್ಸಲ್ ಬಾಕ್ಸ್ ತುಂಬಿದ್ದ ಟ್ರಕ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಏಕಾಏಕಿ ಟ್ರಕ್ ಉರಿಯಲಾರಂಭಿಸಿದೆ. ತಕ್ಷಣ ಟ್ರಕ್ ಚಾಲಕ ಟ್ರಕ್ ನಿಲ್ಲಿಸಿ ಬಚಾವ್ ಆಗಿದ್ದಾನೆ. ಟ್ರಕ್ ನಲ್ಲಿದ್ದ ಪಾರ್ಸಲ್ ಬಾಕ್ಸ್ ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಖಾಸಗಿ ಕಂಪನಿಗೆ ಸೇರಿದ ಟ್ರಕ್ ಇದಾಗಿದ್ದು, ವಿವಿಧ ವಸ್ತುಗಳನ್ನು ಹೊತ್ತು ಬೆಂಗಳೂರಿನತ್ತ ಬರುತ್ತಿತ್ತು. ಈ ವೇಳೆ ಎಂ.ಬಿ.ಅಯ್ಯನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈಯರ್ ಗಳ ಘರ್ಷಣೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ವಾಹನಕ್ಕೆ ಆವರಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular