HomeKarnatakaBig Update: ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಮತ್ತಷ್ಟು ರೈಲು ಆಗಮನ

Big Update: ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಮತ್ತಷ್ಟು ರೈಲು ಆಗಮನ

ನಮ್ಮ ಮೆಟ್ರೋ ಹಸಿರು ಮಾರ್ಗದ ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್ ಒಂದಿದೆ. ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ಹಸಿರು ಮಾರ್ಗಕ್ಕೆ ರೈಲುಗಳನ್ನು ನೀಡಿದೆ. ಭಾರತದಲ್ಲೇ ಜೋಡಿಸಲಾದ ಮೊದಲ ರೈಲುಗಳು ಇದಾಗಿವೆ.

ಫೆಬ್ರವರಿ 18ರಂದು ಪಶ್ಚಿಮ ಬಂಗಾಳದಿಂದ ಹೊರಟಿದ್ದ 6 ಬೋಗಿಗಳು ಪೀಣ್ಯದ ಡಿಪೋಗೆ ಬಂದು ಸೇರಿವೆ. ಬಿಎಂಆರ್‌ಸಿಎಲ್ ಈ ಬೋಗಿಗಳನ್ನು ಸ್ವೀಕಾರ ಮಾಡಿದ್ದು, ಪರಿಶೀಲನೆಗಾಗಿ ಐಬಿಎಲ್ ಲೈನ್‌ಗೆ ಕಳಿಸಲಾಗಿದೆ.

ಈ ಬೋಗಿಗಳನ್ನು ಡಿಟಿಜಿ ಪರೀಕ್ಷೆಗೆ ಒಳಪಡಿಸಬೇಕಿದೆ. ಒಂದು ರೈಲು 750 ಕಿ.ಮೀ. ಸಂಚಾರ ನಡೆಸಿ, ವಿದ್ಯುತ್ ವ್ಯವಸ್ಥೆ ಸೇರಿದಂತೆ ವಿವಿಧ ಪರಿಶೀಲನೆಗೆ ಒಳಗಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಗಲು ಹೊತ್ತಿನಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುವ ಕಾರಣಕ್ಕೆ ರಾತ್ರಿ ಸಮಯದಲ್ಲಿ ಮಾತ್ರ ಈ ರೈಲುಗಳ ಪರೀಕ್ಷೆ ನಡೆಸಲಾಗುತ್ತದೆ. ಈ ತಿಂಗಳ ಅಂತ್ಯಕ್ಕೆ  ಇನ್ನೊಂದು ರೈಲು ಟಿಆರ್‌ಎಸ್‌ಎಲ್‌ನಿಂದ ಹೊರಡುವ ನಿರೀಕ್ಷೆ ಇದೆ.

ಈ ಎರಡು ರೈಲು ಮತ್ತು ಚೀನಾದಲ್ಲಿ ತಯಾರು ಮಾಡಿದ ಮಾದರಿ ರೈಲು ಮೇ ಅಥವ ಜೂನ್ ತಿಂಗಳಿನಲ್ಲಿ ನೇರಳೆ ಮತ್ತು ಹಸಿರು ಮಾರ್ಗಕ್ಕೆ ನಿಯೋಜನೆ ಮಾಡಲಾಗುತ್ತದೆ. ಪೀಕ್ ಅವರ್‌ನಲ್ಲಿನ ರೈಲುಗಳ ಸಂಖ್ಯೆ ಹೆಚ್ಚಳ ಮಾಡಲು ಇದು ಅನುಕೂಲ ಮಾಡಿಕೊಡಲಿದೆ.

ಈ ರೈಲುಗಳು 2025ರ ಅಂತ್ಯಕ್ಕೆ ಆಗಮಿಸಬೇಕಿತ್ತು. ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿ 57 ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಈಗ ಇನ್ನೂ 3 ರೈಲುಗಳು ಸೇರ್ಪಡೆಗೊಳ್ಳಲಿವೆ.

ಟಿಆರ್‌ಎಸ್‌ಎಲ್‌ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನು ಏಪ್ರಿಲ್ ವೇಳೆಗೆ ಇನ್ನಷ್ಟು ರೈಲುಗಳನ್ನು ನೀಡಲಿದೆ. ಬಿಎಂಆರ್‌ಸಿಎಲ್ ಮಾಡಿಕೊಂಡ ಒಪ್ಪಂದದ ಪ್ರಕಾರ ಅದು ಇನ್ನೂ 18 ರೈಲುಗಳನ್ನು ಅದು ಬಿಎಂಆರ್‌ಸಿಎಲ್‌ಗೆ ನೀಡಬೇಕಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗವು ಸುಮಾರು 30.5 ಕಿ.ಮೀ. ಉದ್ದವಾಗಿದೆ ಮತ್ತು 29 ನಿಲ್ದಾಣಗಳನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ ಮೂರು ನಿಲ್ದಾಣ ಹೊಸದಾಗಿ ಸೇರಿದ್ದು ಈಗ ಮಾದಾವರ ತನಕ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ.

ಈ ಹಸಿರು ಮಾರ್ಗ ಆರ್.ವಿ.ರಸ್ತೆ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ, ಮೆಜೆಸ್ಟಿಕ್‌ನಲ್ಲಿ ನೇರಳೆ ಮಾರ್ಗಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಕೆಲವೇ ತಿಂಗಳಿನಲ್ಲಿ ಈ ಮಾರ್ಗದಲ್ಲಿ ಇನ್ನು ಮೂರು ರೈಲುಗಳು ಸೇರ್ಪಡೆಯಾಗಲಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular