HomeLatest NewsBREAKING : ಧರ್ಮಸ್ಥಳದ ಬಗ್ಗೆ 'ಅಶ್ಲೀಲ ಹೇಳಿಕೆ' : 'ಗಿರೀಶ್ ಮಟ್ಟಣ್ಣನವರ್' ವಿರುದ್ಧ ಮತ್ತೊಂದು 'FIR'...

BREAKING : ಧರ್ಮಸ್ಥಳದ ಬಗ್ಗೆ ‘ಅಶ್ಲೀಲ ಹೇಳಿಕೆ’ : ‘ಗಿರೀಶ್ ಮಟ್ಟಣ್ಣನವರ್’ ವಿರುದ್ಧ ಮತ್ತೊಂದು ‘FIR’ ದಾಖಲು.!

ಬೆಳ್ತಂಗಡಿ : ಗಿರೀಶ್ ಮಟ್ಟಣ್ಣನವರ್ ಗೆ ಸಂಕಷ್ಟ ಎದುರಾಗಿದ್ದು, ಮತ್ತೊಂದು ಪ್ರಕರಣ ದಾಖಲಾಗಿದೆ.ಧರ್ಮಸ್ಥಳದ ಬಗ್ಗೆ ‘ಅಶ್ಲೀಲ ಹೇಳಿಕೆ’ ನೀಡಿದ ಆರೋಪದ ಮೇರೆಗೆ  ‘ಗಿರೀಶ್ ಮಟ್ಟಣ್ಣನವರ್’ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ರಾಜೇಂದ್ರ ದಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನೆಲೆ ಕೇಸ್ ದಾಖಲಾಗಿದೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ಧರ್ಮಸ್ಥಳದ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ಸೆಕ್ಷನ್ 296 ಅಡಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular