HomeKarnatakaBREAKING: ಪ್ರವಾಸಕ್ಕೆ ಹೋಗಿದ್ದ ಯುವಕ ಸಾಸಲಮರಿ ಬ್ರಿಡ್ಜ್ ಬಳಿ ರೈಲಿನಿಂದ ಬಿದ್ದು ಸಾವು

BREAKING: ಪ್ರವಾಸಕ್ಕೆ ಹೋಗಿದ್ದ ಯುವಕ ಸಾಸಲಮರಿ ಬ್ರಿಡ್ಜ್ ಬಳಿ ರೈಲಿನಿಂದ ಬಿದ್ದು ಸಾವು

ರಾಯಚೂರು: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಯುವಕ ಸಾಸಲಮರಿ ಬ್ರಿಡ್ಜ್ ಬಳಿ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

ಸುಮಂತ್ ಕುಮಾರ್ (18) ಮೃತ ಯುವಕ. ಮೃತ ಯುವಕ ಕಸಬಾ ಲಿಂಗಸಗೂರು ನಿವಾಸಿ ಸ್ನೇಹಿತರ ಜೊತೆ ಟ್ರಿಪ್ ಗೆ ಹೋಗಿ ವಾಪಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ದಿನಗಳ ಹಿಂದೆ ಸುಮಂತ್ ಕುಮಾರ್ ೬ ಜನ ಸ್ನೇಹಿತರ ಜೊತೆ ದಾಂಡೇಲಿ ಟ್ರಿಪ್ ಗೆ ಹೋಗಿದ್ದ. ನಿನ್ನೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಸಿಂಧನೂರಿಗೆ ವಾಪಸ್ ಆಗುತ್ತಿದ್ದರು. ಸಿಂಧನೂರು ಬರುತ್ತಿದ್ದಂತೆ ಸ್ನೇಹಿತರು ಸುಮಂತ್ ಗಾಗಿ ಹುಡುಕಾಡಿದ್ದಾರೆ. ಆದರೆ ರೈಲಿನಲ್ಲಿ ಸುಮಂತ್ ಇರಲಿಲ್ಲ.

ಸಿಂಧನೂರಿಗೆ ೫ ಕಿ.ಮೀ ದೂರದಲ್ಲಿ ಸಾಸಲಮರಿ ಕ್ಯಾಂಪ್ ಬಳಿ ಸುಮಂತ್ ಶವವಾಗಿ ಪತ್ತೆಯಾಗಿದ್ದಾನೆ. ರೈಲಿನಿಂದ ಬಿದ್ದು ಮೃತಪಟ್ಟಿದ್ದಾನೆ. ಸುಮಂತ್ ರೈಲಿನಿಂದ ಹೇಗೆ ಕೆಳಗೆ ಬಿದ್ದಿದ್ದಾನೆ ಎಂಬುದೇ ನಿಗೂಢವಾಗಿದೆ.

ಘಟನಾ ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular