HomeLatest NewsBIG NEWS : ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ 110+ ಸ್ಥಾನಗಳನ್ನು ಗೆಲ್ಲಲಿದೆ : ಅಮಿತ್...

BIG NEWS : ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ 110+ ಸ್ಥಾನಗಳನ್ನು ಗೆಲ್ಲಲಿದೆ : ಅಮಿತ್ ಶಾ ವಿಶ್ವಾಸ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ದಾಖಲಾದ ಭಾರಿ ಮತದಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಶ್ಲಾಘಿಸಿದ್ದಾರೆ. ಅಲ್ಲದೆ, ಈ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಜಯದತ್ತ ಮುನ್ನಡೆಯುತ್ತಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾ, ಮತದಾರರ ಉತ್ಸಾಹಭರಿತ ಭಾಗವಹಿಸುವಿಕೆಯು “ಭಯದಿಂದ ನಂಬಿಕೆಯತ್ತ” ಬದಲಾವಣೆಯ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಿದ ಮತದಾರರಿಗೆ ಧನ್ಯವಾದ ಅರ್ಪಿಸಿದ ಅವರು, ಮುಂದಿನ ಹಂತದ ಮತದಾನದಲ್ಲೂ ಇದೇ ರೀತಿಯ ವೇಗ ಮುಂದುವರಿಯಲಿದೆ ಎಂದು ತಿಳಿಸಿದರು.

 ಮೊದಲ ಹಂತದ ಮತದಾನದ ಮುಕ್ತಾಯದ ನಂತರ ಮಾತನಾಡಿದ ಅಮಿತ್ ಶಾ, ಭಾರತೀಯ ಜನತಾ ಪಾರ್ಟಿ (BJP) ಬಂಗಾಳದಲ್ಲಿ 110ಕ್ಕೂ ಹೆಚ್ಚುಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಚುನಾವಣೆಯಲ್ಲಿ ಕಂಡುಬಂದ ಭಾರಿ ಜನಬೆಂಬಲ ಮತ್ತು ಮತದಾನದ ಪ್ರಮಾಣವು ತೃಣಮೂಲ ಕಾಂಗ್ರೆಸ್ (TMC) ಆಡಳಿತದ ಅಂತ್ಯವನ್ನು ಸೂಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐತಿಹಾಸಿಕ ಶಾಂತಿ: “ಬಹಳ ದಿನಗಳ ನಂತರ, ಚುನಾವಣೆಯ ಸಮಯದಲ್ಲಿ ಒಬ್ಬರೇ ಒಬ್ಬರು ಸಾವನ್ನಪ್ಪಿಲ್ಲ. ಬಂಗಾಳದ ಚುನಾವಣಾ ಇತಿಹಾಸದಲ್ಲೇ ಇದು ಅತ್ಯಂತ ಗಮನಾರ್ಹ ಮತ್ತು ಐತಿಹಾಸಿಕ ಬದಲಾವಣೆ” ಎಂದು ಶಾ ಶ್ಲಾಘಿಸಿದ್ದಾರೆ.ಚುನಾವಣಾ ಹಿಂಸಾಚಾರಕ್ಕೆ ಹೆಸರಾಗಿದ್ದ ಬಂಗಾಳದಲ್ಲಿ ಈ ಬಾರಿ ಯಾವುದೇ ಪ್ರಾಣಾಪಾಯವಿಲ್ಲದೆ ಮತದಾನ ನಡೆದಿರುವುದು ಚುನಾವಣಾ ಪ್ರಕ್ರಿಯೆಯಲ್ಲಿನ ದೊಡ್ಡ ಯಶಸ್ಸು ಎಂದು ಅವರು ಬಣ್ಣಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular