HomeLatest NewsBREAKING : ಮುಷ್ಕರದ ನಡುವೆ ಕೋಲಾರ, ಕೊಪ್ಪಳದಲ್ಲಿ ರಸ್ತೆಗಿಳಿದ 'KSRTC' ಬಸ್ ಗೆ ಕಲ್ಲು...

BREAKING : ಮುಷ್ಕರದ ನಡುವೆ ಕೋಲಾರ, ಕೊಪ್ಪಳದಲ್ಲಿ ರಸ್ತೆಗಿಳಿದ ‘KSRTC’ ಬಸ್ ಗೆ ಕಲ್ಲು ತೂರಾಟ, ಗಾಜು ಪುಡಿ ಪುಡಿ.!

ಬೆಂಗಳೂರು : ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ನೌಕರರು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ. ಮುಷ್ಕರದ ನಡುವೆ ಸಾರಿಗೆ ಬಸ್ ಸಂಚರಿಸಿದ್ದು, ಕೋಲಾರ, ಕೊಪ್ಪಳದಲ್ಲಿ ಬಸ್ ಗೆ ಕಲ್ಲು ತೂರಲಾಗಿದೆ.

ಕೋಲಾರದಲ್ಲಿ ಕೆಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೋಲಾರದ ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಹಾಗೂ ಕೊಪ್ಪಳದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗೆ ಕಲ್ಲು ತೂರಲಾಗಿದೆ. ತಡರಾತ್ರಿ ಯಲಬುರ್ಗಾದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಮಸಹಂಚಿನಹಾಳ ಸಮೀಪ ಬರುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಬಸ್ ನ ಗಾಜು ಪುಡಿಯಾಗಿದೆ. ಕಲ್ಲು ತೂರಾಟದ ನಂತರ ಚಾಲಕ ಡಿಪೋಗೆ ಬಸ್ ಕೊಂಡೊಯ್ದಿದ್ದಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಪರದಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular