HomeKarnatakaಟ್ರಾನ್ಸ್ ಫಾರ್ಮರ್ ಹಿಡಿದುಕೊಂಡು ಆತ್ಮಹತ್ಯೆಗೆ ಶರಣಾದ ಹೆಸ್ಕಾಂ ನೌಕರ

ಟ್ರಾನ್ಸ್ ಫಾರ್ಮರ್ ಹಿಡಿದುಕೊಂಡು ಆತ್ಮಹತ್ಯೆಗೆ ಶರಣಾದ ಹೆಸ್ಕಾಂ ನೌಕರ

ಬಾಗಲಕೋಟೆ: ಹೆಸ್ಕಾಂ ನೌಕರರೊಬ್ಬರು ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಿಡಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ನಡೆದಿದೆ.

ಇಲ್ಲಿನ 51 ನೇಸೆಕ್ಟರ್ ನಲ್ಲಿ ಹೆಸ್ಕಾಂ ನೌಕರ ಟ್ರ್ಯಾನ್ಸ್ ಫಾರ್ಮರ್ ಮೇಲೆ ಹತ್ತಿ ಅದನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಶು ಮಾಸ್ತಿ (35) ಆತ್ಮಹತ್ಯೆಗೆ ಶರಣಾದ ನೌಕರ.

ಟ್ರಾನ್ಸ್ ಫಾರ್ಮರ್ ಮೇಲೆಯೇ ಪರಶು ಮಾಸ್ತಿ ಸುಟ್ಟು ಕರಕಲಾಗಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular