HomeKarnatakaತಾಂತ್ರಿಕ ದೋಷದಿಂದಾಗಿ ಹೊಲದಲ್ಲಿ ವಿಮಾನವಿಳಿಸಿದ ಪೈಲೆಟ್...‌!

ತಾಂತ್ರಿಕ ದೋಷದಿಂದಾಗಿ ಹೊಲದಲ್ಲಿ ವಿಮಾನವಿಳಿಸಿದ ಪೈಲೆಟ್…‌!

ವಿಮಾನ ಹಾರಾಟ ತರಬೇತಿ ಪಡೆಯುತ್ತಿದ್ದ ಪೈಲೆಟ್ ಒಬ್ಬರು ತಾಂತ್ರಿಕ ದೋಷ ತಲೆದೋರಿದ ಕಾರಣಕ್ಕೆ ಹೊಲದಲ್ಲಿ ವಿಮಾನ ಇಳಿಸಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

ಭಾನುವಾರದಂದು ಈ ಘಟನೆ ನಡೆದಿದ್ದು, ಕಲಬುರಗಿ ನಗರದ ಹೊರ ವಲಯದಲ್ಲಿರುವ ವಿಮಾನ ನಿಲ್ದಾಣದಲ್ಲಿ ತರಬೇತಿ ಕೇಂದ್ರವಿದ್ದು, ಇಲ್ಲಿ ಪೈಲೆಟ್ ತರಬೇತಿಯನ್ನು ನೀಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಂತೆ ಭಾನುವಾರ ತರಬೇತಿ ಆರಂಭವಾದ ಬಳಿಕ ವಿಮಾನವೊಂದು ಟೇಕಾಫ್ ಆಗಿ 15 ಕಿ.ಮೀ. ಕ್ರಮಿಸಿದ ಬಳಿಕ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಕೂಡಲೇ ಎಚ್ಚೆತ್ತ ಪೈಲೆಟ್ ಹಾಗೂ ತರಬೇತಿ ನಿರತ ಅಭ್ಯರ್ಥಿ ಸಮೀಪದ ಹೊಲದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಿದ್ದಾರೆ. ಅದೃಷ್ಟವಶಾತ್ ಪೈಲೆಟ್ ಹಾಗೂ ತರಬೇತಿ ನಿರತ ಅಭ್ಯರ್ಥಿಗೆ ಯಾವುದೇ ಅಪಾಯವಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular