HomeIndiaBIG NEWS: ರೈಲ್ವೆ ಹಳಿ ಮೇಲೆ ಮೂವರು ಮಹಿಳೆಯರ ಶವ ಪತ್ತೆ

BIG NEWS: ರೈಲ್ವೆ ಹಳಿ ಮೇಲೆ ಮೂವರು ಮಹಿಳೆಯರ ಶವ ಪತ್ತೆ

ತಿರುವನಂತಪುರಂ: ರೈಲ್ವೆ ಹಳಿ ಮೇಲೆ ಮೂವರು ಮಹಿಳೆಯರ ಶವ ಪತ್ತೆಯಾಗಿರುವ ಘಟನೆ ಕೇರಳದ ಕೊಟ್ಟಾಯಂ ಬಳಿ ನಡೆದಿದೆ.

ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕೊಟ್ಟಾಯಂ-ನೀಲಂಬೂರ್ ರೈಲು ಎರ್ನಾಕುಲಂ ಕಡೆಗೆ ಚಲಿಸುತ್ತಿದ್ದ ವೇಳೆ ಮೂವರು ಮಹಿಲೆಯರು ರೈಲಿನ ಮುಂದೆ ಹಾರಿದ್ದಾರೆ ಎನ್ನಲಾಗಿದೆ.

ಮೃತರ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಕೆಲ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular