ಮೈಸೂರಿನಿಂದ ದರ್ಬಾಂಗ್ ಗೆ ತೆರಳುತ್ತಿದ್ದ Mysuru-Darbhanga Express ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿರುವ ಘಟನೆ ಇಂದು ಸಂಜೆ ನಡೆದಿದೆ. ತಮಿಳುನಾಡಿನ ಚೆನ್ನೈ ರೈಲ್ವೇ ವಿಭಾಗದ ಗುಮ್ಮಿಡಿಪೊಂಡಿ ಬಳಿಯ ಕವರಪೇಟೈ ಬಳಿ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ Mysuru-Darbhanga Express ರೈಲಿನ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅಪಘಾತದ ವಿಷಯ ತಿಳಿಯುತ್ತಿದ್ದಂತೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.
ಈ ಅಪಘಾತದ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು ಚಿತ್ರ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ರಕ್ಷಣಾ ತಂಡಗಳ ಸಹಾಯ ಯಾಚಿಸಿದ್ದಾರೆ.
Train accident in chennai Tamilnadu near ghumdipundi
Train no. 12578 please help us @AshwiniVaishnaw @PiyushGoyal @PMOIndia @AmitShah @GMSRailway pic.twitter.com/UqPCzaisIE— Rahul (@kumarsankarBJP) October 11, 2024

