ರಾಯಚೂರು: ರಾಯಚೂರು ನಗರದ ಹೊಸ ಬಸ್ ನಿಲ್ದಾಣ ಸಮೀಪ ಕಟ್ಟಡದ ಛಾವಣಿ ಕುಸಿದು ಮೂವರು ಮೃತಪಟ್ಟಿದ್ದು, ಏಳು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕಿರು ಚಿತ್ರವೊಂದರ ಪೋಸ್ಟರ್ ಹಚ್ಚುವಾಗ ಘಟನೆ ನಡೆದಿದೆ. ನಾಗರಾಜು(21), ರವಿಕುಮಾರ್(21), ಅರ್ಜುನ ಕರಿಗುಡ್ಡ(21) ಮೃತಪಟ್ಟವರು ಎಂದು ಹೇಳಲಾಗಿದೆ. ‘2025 ಅಂತ್ಯವಾಯಿತು’ ಎನ್ನುವ ಕಿರು ಚಿತ್ರದ ಪೋಸ್ಟರ್ ಹಚ್ಚುವಾಗ ಏಕಾಏಕಿ ಕಟ್ಟಡದ ಮೇಲ್ಚಾವಣಿ ಕುಸಿದಿದೆ.
ಘಟನೆಯಲ್ಲಿ ರವಿಕುಮಾರ್ ಮತ್ತು ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅರ್ಜುನ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಎಸ್ಟಿ ವಸತಿ ನಿಲಯದ 7 ವಿದ್ಯಾರ್ಥಿಗಳು ಕೂಡ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.

