ಬೆಂಗಳೂರು ನಗರದಲ್ಲಿ ಮಾರ್ಚ್ 1ರ ಭಾನುವಾರ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಸಂಚಾರಿ ಪೊಲೀಸರು ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವತಿಯಿಂದ 3ನೇ ಆವೃತ್ತಿಯ ರಾಜ್ಯ ಮಟ್ಟದ ‘ಕರ್ನಾಟಕ ಪೊಲೀಸ್ ರನ್ 10/05ಕೆ’ ಕಾರ್ಯಕ್ರಮದ ಅಂಗವಾಗಿ ಈ ಬದಲಾವಣೆ ಮಾಡಲಾಗಿದೆ.
ದಿನಾಂಕ 01.03.2026 ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ವಿಧಾಸೌಧ ಮುಂಭಾಗದಲ್ಲಿರುವ ಗ್ರಾಂಡ್ ಸ್ಟೆಪ್ ಮೆಟ್ಟಿಲುಗಳಿಂದ ಆರಂಭವಾಗಲಿದೆ.
ಕೆ.ಆರ್ ವೃತ್ತ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕಬ್ಬನ್ ಪಾರ್ಕ್ ಒಳಭಾಗ, ಕಸ್ತೂರಬಾ ರಸ್ತೆ, ಕ್ವೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಕಬ್ಬನ್ ರಸ್ತೆ, ಬಿ.ಆರ್.ಪಿ. ಜಂಕ್ಷನ್, ಮಣಿಪಾಲ್ ಸೆಂಟರ್ ಹತ್ತಿರ ಯುಟರ್ನ್ ಪಡೆದು ಸಿಟಿ ಜಂಕ್ಷನ್‌ಗೆ ಬಂದು ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧವನ್ನು ತಲುಪಲಿದೆ. ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ವಿಧಾನಸೌಧದ ಗೇಟ್ ನಂ.2 ಮೂಲಕ ಪ್ರವೇಶಿಸುವುದು.
ವಾಹನ ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು (ಬೆಳಗ್ಗೆ 6 ರಿಂದ 11:30ರ ತನಕ)
* ವಿಧಾನಸೌಧದಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
* ಬಾಳೆಕುಂದ್ರಿ ವೃತ್ತದಿಂದ ಕೆ.ಆರ್. ಸರ್ಕ್‌ಲ್ ಕಡೆಗೆ ಹೋಗುವ ವಾಹನಗಳು ಕನ್ನಿಂಗ್ ಹ್ಯಾಮ್ ರಸ್ತೆ ಕಡೆಗೆ ಸಂಚರಿಸಿ ಚಂದ್ರಿಕ ಜಂಕ್ಷನ್ ಮುಖಾಂತರ ಸಂಚರಿಸುವುದು. ವಿಧಾನಸೌಧಕಡೆಗೆ ಯಾವುದೇ ವಾಹನಗಳ ಪ್ರದೇಶಕ್ಕೆ ಅವಕಾಶವಿರುವುದಿಲ್ಲ.
* ಹೆಡ್ಸನ್ ಜಂಕ್ಷನ್ ನಿಂದ ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ರಸ್ತೆ, ಶಾಂತಿನಗರ ಮತ್ತು ರಿಚ್ಮಂಡ್ ವೃತ್ತಕ್ಕೆ ಕಳುಹಿಸಲಾಗುವುದು.
* ಮಣಿಪಾಲ್‌ನಿಂದ ಸಿ.ಟಿ.ಓ ಕಡೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಸಿ.ಟಿ.ಓ. ದಿಂದ ಮಣಿಪಾಲ್ ಕಡೆಗೆ ಸಂಚರಿಸುವ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
* ಹೆಡ್ ಕ್ವಾರ್ಟರ್ ಜಂಕ್ಷನ್ ನಿಂದ ಬರುವಂತಹ ವಾಹನಗಳು ಇನ್‌ಫೆಂಟ್ರಿರಸ್ತೆಯ ಮುಖಾಂತರ ಸಾಗಿ ಡಿಕೆನ್ಸನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆಯ ಮುಖಾಂತರ ಕಬ್ಬನ್ ರಸ್ತೆಗೆ ಪ್ರವೇಶಿಸಬಹುದಾಗಿದೆ.
ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
* ಎಂ.ಎಸ್. ಬಿಲ್ಡಿಂಗ್ ಸುತ್ತ ಮುತ್ತಲಿನ ಪ್ರದೇಶಗಳು
* ಎ.ಜಿ. ಕಛೇರಿಯಿಂದ ಎಂ.ಎಸ್. ಬಿಲ್ಡಿಂಗ್ ವರೆಗೆ
* ಜ್ಞಾನಜ್ಯೋತಿ ಸಭಾಂಗಣ ಅವರಣ
* ನೆಹರು ಪ್ಲಾನಟೋರಿಯಂ ಆವರಣ
* ಪೋಸ್ಟ್ ಆಫೀಸ್ ರಸ್ತೆ
* ಸ್ಕೌಟ್ಸ್ ಅಂಡ್ ಗೈಡ್ ಮೈದಾನ, ಅರಮನೆ ರಸ್ತೆ
* ಎಂ.ಎಲ್.ಸಿ.ಪಿ ಪಾರ್ಕಿಂಗ್, ಫ್ರೀಡಂ ಪಾರ್ಕ್ ಹತ್ತಿರ (ಪಾವತಿಆಧಾರದ ಮೇಲೆ)
ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು
- ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ
- ರಾಜಭವನ ರಸ್ತೆ
- ಕೆ.ಬಿ. ರಸ್ತೆ
- ಸ್ಯಾಂಕಿ ರಸ್ತೆ
- ನೃಪತುಂಗ ರಸ್ತೆ
- ಎ.ಜಿಕಛೇರಿಯಿಂದ ಚಾಲುಕ್ಯ ಜಂಕ್ಷನ್ ವರೆಗೆ
- ಕ್ವೀನ್ಸ್ ರಸ್ತೆ
- ಮ್ಯೂಸಿಯಂ ರಸ್ತೆ
ಈ ಕಾರ್ಯಕ್ರಮದ ಸಲುವಾಗಿ ಬಿ.ಎಂ.ಆರ್.ಸಿ.ಎಲ್ ವತಿಯಿಂದ ಮೆಟ್ರೋ ಸೇವೆಯನ್ನು ಬೆಳಗ್ಗೆ 5 ಗಂಟೆಯಿಂದ ಆರಂಭಿಸಲಾಗುತ್ತಿದ್ದು, ಈ ಸೇವೆಯ ಸದ್ಬಳಕೆಯನ್ನು ಮಾಡಿಕೊಳ್ಳುವುದರ ಜೊತೆಗೆ ಇತರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿ ಕಾರ್ಯಕ್ರಮದ ಸ್ಥಳವನ್ನು ತಲುಪಲು ಮನವಿ ಮಾಡಲಾಗಿದೆ.

