HomeLatest NewsBREAKING: ವಸತಿ ಶಾಲೆಯ ಮಾಲೀಕನಿಂದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಮಕ್ಕಳನ್ನು ಕೂಡಿಹಾಕಿ ಬೆದರಿಕೆ...

BREAKING: ವಸತಿ ಶಾಲೆಯ ಮಾಲೀಕನಿಂದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಮಕ್ಕಳನ್ನು ಕೂಡಿಹಾಕಿ ಬೆದರಿಕೆ ಹಾಕಿದ್ದ ಗಂಡ-ಹೆಂಡತಿ

ದೇವನಹಳ್ಳಿ: ವಸತಿ ಶಾಲೆಯ ಮಾಲೀಕನೇ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಪತಿಯ ನೀಚ ಕೃತ್ಯಕ್ಕೆ ಪತ್ನಿಯೂ ಸಾಥ್ ನೀಡಿರುವ ಹೇಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಎಸ್.ಎಲ್.ಎಸ್ ವಸತಿ ಶಾಲೆಯ ಅಧ್ಯಕ್ಷನೂ ಆಗಿರುವ ಧನಂಜಯ್, ವಸತಿ ಶಾಲೆಯ ಇಬ್ಬರು ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಿದದನೆ. 15 ವರ್ಷದ ಬಾಲಕಿಯರಿಬ್ಬರ ಮೇಲೂ ಲೈಂಗಿಕ ದೌರ್ಜನ್ಯವೆಸಗಿ, ಹಿಂಸಿಸಿದ್ದಲ್ಲದೇ ಇಬ್ಬರನ್ನೂ ರೂಮಿನಲ್ಲಿ ಕೂಡಿ ಹಾಕಿ ವಿಶ್ಜಯ ಎಲ್ಲಿಯೂ ಬಾಯಿಬಿದಬಾರದು, ಪೋಷಕರಿಗೆ ಫೋನ್ ಕೂಡ ಮಾಡಬಾರದು ಎಂದು ಬೆದರಿಕೆ ಹಾಕಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧನಂಜಯ್ ನ ನೀಚ ಕೃತ್ಯಕ್ಕೆ ಆತನ ಪತ್ನಿ ಶೈಲಜಾ ಸಾಥ್ ನೀಡಿದ್ದು, ಆಕೆಯೂ ಬಾಲಕಿಯರಿಗೆ ಹೆದರಿಸಿ ಹಿಂಸಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಕಂಠಪೂರ್ತಿ ಕುಡುಬಂದು ಬಾಲಕಿಯರ ರೂಮಿಗೆ ಬಂದು ಕಿರುಕುಳ ನೀಡುತ್ತಿದ್ದನಂತೆ ಧನಂಜಯ್.

ಸತತ 8 ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ಬಾಲಕಿಯರು ಹೇಳಿದ್ದಾರೆ. ಅದಾದ ಬಳಿಕ ನಿನ್ನೆ (ಫೆ.27) ಪೋಷಕರಿಗೆ ಕರೆ ಮಾಡಿದ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಶಾಲೆ ಬಳಿ ಬಂದ ಬಾಲಕಿಯರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ದೇವನಹಳ್ಳಿ ಪೊಲೀಸರು ಆರೋಪಿ ಧನಂಜಯ್ ನನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular