HomeKarnatakaಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಬೆಂಗಳೂರು: ಬಾಡಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಾಗಲಗುಂಟೆಯಲ್ಲಿ ನಡೆದಿದೆ.

ಕೈಕಾಲು ಕಟ್ಟಿ, ಹಲ್ಲೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಮೃತದೇಹ ಗುರುತು ಪತ್ತೆಯಾಗಿಲ್ಲ. ಮೋಹನ್ ಕೃಷ್ಣ ಮತ್ತು ಊರ್ವಶಿ ಎಂಬವರು ಈ ಮನೆಯನ್ನು ಬಾಡಿಗೆ ಪಡೆದಿದ್ದರು ಎನ್ನಲಾಗಿದ್ದು, ಅವರೀಗ ನಾಪತ್ತೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕನೋರ್ವನ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಸುತ್ತಿ, ರಾಡ್​​ನಿಂದ ಹಲ್ಲೆ ಮಾಡಿದ್ದಲ್ಲದೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ನಟರಾಜ್​​ ಎಂಬವರು ಬಾಡಿಗೆಗೆ ನೀಡಿದ್ದ ಮನೆಯಿಂದ ದುರ್ನಾಥ ಬರುತ್ತಿದ್ದ ಹಿನ್ನೆಲೆ ಪರೀಕ್ಷಿಸಿದಾಗ ನಾಲ್ಕೈದು ದಿನಗಳ ಹಿಂದೆಯೇ ಕೊಲೆ ಮಾಡಿರುವ ಕಾರಣ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತದೇಹ ಪತ್ತೆಯಾಗಿರುವ ಮನೆಯನ್ನು ಮಾಲಿಕ ನಟರಾಜ್​​ ಅವರ ಬಳಿ ಎರಡು ತಿಂಗಳ ಹಿಂದೆ ಮೋಹನ್ ಕೃಷ್ಣ ಮತ್ತು ಊರ್ವಶಿ ಎಂಬುವವರು ಬಾಡಿಗೆ ಗೆ ಪಡೆದಿದ್ದರು. ಊರ್ವಶಿ ನಾನು ಸಿನೆಮಾ ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದೆನೆ ಅಂತ ಮನೆ ಮಾಲಿಕರ ಬಳಿ ಪರಿಚಯಿಸಿಕೊಂಡಿದ್ದಳು ಎನ್ನಲಾಗಿದೆ. ಬಾಡಿಗೆ ಸಂಬಂಧ ಇನ್ನೇನು ಅಗ್ರಿಮೆಂಟ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲಿ ಮುಂದಿನ ತಿಂಗಳು ಮನೆ ಖಾಲಿ ಮಾಡಿಬಿಡ್ತೀವಿ ಎಂದು ಇವರು ತಿಳಿಸಿದ್ದರಂತೆ. ಹೀಗಾಗಿ ಅಗ್ರಿಮೆಂಟ್​​ ಮಾಡಿಸಿರಲಿಲ್ಲವಂತೆ.

ಆ ಬಳಿಕ ನಟರಾಜ್​​ ಮನೆ ಬಳಿ ಬಂದಾಗೆಲ್ಲ ಬಾಗಿಲಿಗೆ ಬೀಗ ಹಾಕಿರೋದು ಕಂಡುಬರುತ್ತಿತ್ತು. ಈ ನಡುವೆ ಅಕ್ಕಪಕ್ಕದ ಮನೆಯವರು ನಟರಾಜ್ ಮಗನಿಗೆ ಫೋನ್ ಮಾಡಿ ನಿಮ್ಮ ಮನೆಯಿಂದ ಏನೋ ಕೆಟ್ಟ ವಾಸನೆ ಬರ್ತಿದೆ ಎಂದು ತಿಳಿಸಿದ್ದಾರೆ. ಮಗ ರವಿಕಿರಣ್ ಮನೆಗೆ ಬಂದು ನೋಡಿದಾಗ ಕೊಲೆಯಾದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಗೂ ಮುನ್ನ ಮನೆಯಲ್ಲಿ ಪಾರ್ಟಿ ನಡೆದಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಮೃತದೇಹವನ್ನು ಶಿಫ್ಟ್​​ ಮಾಡಲಾಗಿದೆ.

ಇನ್ನು ಕೊಲೆಯಾಗಿರುವ ವ್ಯಕ್ತಿ ಯಾರೆಂಬ ಬಗ್ಗೆ ಗುರುತು ಪತ್ತೆಯಾಗಿಲ್ಲ. ಘಟನೆ ನಡೆದು ನಾಲ್ಕೈದು ದಿನಗಳಾಗಿರುವ ಹಿನ್ನೆಲೆ ದೇಹ ಗುರುತು ಸಿಗದಷ್ಟು ಕೊಳೆತಿದೆ. ಮನೆ ಬಾಡಿಗೆಗೆ ಪಡೆದಿದ್ದ ಊರ್ವಶಿ ಮತ್ತು ಮೋಹನ ಕೃಷ್ಣ ಗಂಡ ಹೆಂಡತಿನಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular