HomeEntertainment‘ವಾವ್! ಎಂತಹ ಸಿನಿಮಾ..!’: ‘ಟಾಕ್ಸಿಕ್’ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ನಟ ಉಪೇಂದ್ರ

‘ವಾವ್! ಎಂತಹ ಸಿನಿಮಾ..!’: ‘ಟಾಕ್ಸಿಕ್’ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ನಟ ಉಪೇಂದ್ರ

ಬೆಂಗಳೂರು :   ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸಿನಿಮಾಗೆ ಪಾಸಿಟಿವ್ ಹಾಗೂ ನೆಗಟಿವ್ ವಿಮರ್ಶೆಗಳು ಎರಡೂ ವ್ಯಕ್ತವಾಗುತ್ತಿದ್ದು, ಇದರ ನಡುವೆಯೂ ‘ಟಾಕ್ಸಿಕ್’ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸಿನಿಮಾ ಕುರಿತು ಸಿನಿಪ್ರಿಯರು ಹಾಗೂ ಸೆಲೆಬ್ರಿಟಿಗಳು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿದ ನಟ ಉಪೇಂದ್ರ, ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿದ ನಟ ಉಪೇಂದ್ರ, ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಿತ್ರದ ಮೇಕಿಂಗ್, ಕಥೆ ಹಾಗೂ ಅದ್ದೂರಿತನವನ್ನು ಕಂಡು ‘ವಾವ್! ಎಂತಹ ಸಿನಿಮಾ..!’ ಎಂದು ಪ್ರತಿಕ್ರಿಯಿಸುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಉಪೇಂದ್ರ, ‘ಟಾಕ್ಸಿಕ್’ ಒಂದು ಕಾಲ್ಪನಿಕ ಕಥೆ, ಆದರೆ ದೊಡ್ಡವರಿಗಾಗಿ’ ಎಂದು ಹೇಳಿದ್ದಾರೆ. ಇದೇ ವೇಳೆ, ‘ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ!’ ಎಂದು ಸಿನಿಮಾವನ್ನು ಬಣ್ಣಿಸಿದ್ದಾರೆ.ಚಿತ್ರದಲ್ಲಿರುವ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರ ಶ್ರಮ, ಶ್ರದ್ಧೆ ಮತ್ತು ಕಲೆಯ ಮೇಲಿನ ಪ್ರೀತಿಯನ್ನು ಉಪೇಂದ್ರ ಪ್ರಶಂಸಿಸಿದ್ದಾರೆ. ಯಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.‘ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ. ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪೇಂದ್ರ ಟ್ವೀಟ್

TOXIC ಒಂದು ಕಾಲ್ಪನಿಕ ಕಥೆ… ಆದರೆ ದೊಡ್ಡವರಿಗಾಗಿ ?? Toxic ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್! ಎಂದು  ನಟ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ

 ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಭರ್ಜರಿ ನಿರೀಕ್ಷೆಗಳ ನಡುವೆ ತೆರೆಕಂಡಿದೆ. ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ಯಾಂಗ್‌ಸ್ಟರ್ ಜಗತ್ತು, ಕುಟುಂಬ ಸಂಬಂಧಗಳು, ಅಧಿಕಾರ, ಹಿಂಸೆ ಮತ್ತು ವೈಯಕ್ತಿಕ ಸಂಘರ್ಷಗಳನ್ನು ಒಳಗೊಂಡ ಕಥೆಯನ್ನು ಚಿತ್ರ ಹೊಂದಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ವಿಭಿನ್ನ ಲೋಕವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಪ್ರಮುಖ ಹೈಲೈಟ್ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್. ಅವರ ಲುಕ್, ಮಾಸ್ ಎಂಟ್ರಿ, ಆ್ಯಕ್ಷನ್ ಹಾಗೂ ಪಾತ್ರ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಸಿನಿಮಾದ ಪ್ರಮುಖ ಆಕರ್ಷಣೆಯೇ ಯಶ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ದೃಶ್ಯ ವೈಭವ, ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ದೊಡ್ಡ ಕ್ಯಾನ್ವಾಸ್ ಗಮನ ಸೆಳೆಯುತ್ತವೆ. ಆದರೆ ಅತಿಯಾದ ಹಿಂಸೆ, ದೀರ್ಘ ಅವಧಿ ಮತ್ತು ಕೆಲವು ಗೊಂದಲಕಾರಿ ಸನ್ನಿವೇಶಗಳು ಸಿನಿಮಾದ ವೇಗಕ್ಕೆ ಅಡ್ಡಿಯಾಗುತ್ತವೆ ಎಂಬ ಟೀಕೆಗಳೂ ಕೇಳಿಬಂದಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular