HomeLatest Newsಟಾಕ್ಸಿಕ್’ ಟ್ರೈಲರ್‌ನಲ್ಲಿ ಈ ಸೀನ್ ನೋಡಿ ಫ್ಯಾನ್ಸ್ ಶಾಕ್: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಟಾಕ್ಸಿಕ್’ ಟ್ರೈಲರ್‌ನಲ್ಲಿ ಈ ಸೀನ್ ನೋಡಿ ಫ್ಯಾನ್ಸ್ ಶಾಕ್: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಟಾಕ್ಸಿಕ್’ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಯಶ್ ಅಭಿಮಾನಿಗಳಲ್ಲಿ ಭರ್ಜರಿ ಚರ್ಚೆ ಶುರುವಾಗಿದೆ. ಟ್ರೈಲರ್‌ನ ಈ ಒಂದು ಸೀನ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಟ್ರೇಲರ್‌ನ ಆರಂಭದಲ್ಲೇ ಯಶ್ ಅವರ ಪಾತ್ರವನ್ನು ಅತ್ಯಂತ ಭಯಾನಕ ಹಾಗೂ ಶಕ್ತಿಶಾಲಿಯಾಗಿ ಪರಿಚಯಿಸಲಾಗಿದ್ದು ಇಡೀ ವೀಡಿಯೊದಲ್ಲಿ ಕ್ರೈಮ್ ರಕ್ತಪಾತ ಅತಿಯಾದ ಹಿಂಸೆ ಮತ್ತು ಬೋಲ್ಡ್ ಸೀನ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ

ಟ್ರೇಲರ್‌ನಲ್ಲೇನಿದೆ?: ವಿಭಿನ್ನ ಲುಕ್ ಹಾಗೂ ವೈಲೆಂಟ್ ಆಕ್ಷನ್

ಟ್ರೇಲರ್‌ನಲ್ಲಿ ಯಶ್ ಹಲವು ವಿಭಿನ್ನ ಹಾಗೂ ರಗಡ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್‌ಸ್ಟರ್ ಡ್ರಾಮಾ, ಅಧಿಕಾರಕ್ಕಾಗಿ ನಡೆಯುವ ಸಂಘರ್ಷ, ದ್ರೋಹ ಹಾಗೂ ಸ್ಟೈಲಿಶ್ ಆಕ್ಷನ್ ದೃಶ್ಯಗಳು ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯರು ಯಶ್ ಪಾತ್ರಕ್ಕಾಗಿ ಪೈಪೋಟಿ ನಡೆಸುವ ದೃಶ್ಯಗಳ ಜೊತೆಗೆ ಯಶ್ ಅವರ ಬೋಲ್ಡ್ ಮತ್ತು ಬೆತ್ತಲೆ ಅವತಾರದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಥೆಯ ಮುಖ್ಯ ಎಳೆಯನ್ನು ರಹಸ್ಯವಾಗಿಟ್ಟುಕೊಂಡು, ಕೇವಲ ಯಶ್ ಅವರ ಪಾತ್ರವರ್ಗ ಮತ್ತು ಆ ಜಗತ್ತಿನ ಕಲ್ಪನೆಯನ್ನು ಬಿಂಬಿಸುವಲ್ಲಿ ಟ್ರೇಲರ್ ಯಶಸ್ವಿಯಾಗಿದೆ.

https://x.com/TumhariNoor/status/2086098021281063292

ನೆಟ್ಟಿಗರ ಮಿಶ್ರಪ್ರತಿಕ್ರಿಯೆ:

ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಯಶ್ ಅವರ ಆಕ್ಷನ್ ಅವತಾರ, ವಿಭಿನ್ನ ಲುಕ್ ಹಾಗೂ ಸಿನಿಮಾದ ಅದ್ಧೂರಿತನವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.

ಉದ್ದವಾದ ಟ್ರೇಲರ್ ಎಂದರೆ ಒಳ್ಳೆಯ ಸಿನಿಮಾ ಎಂದರ್ಥವಲ್ಲ ಇತ್ತೀಚೆಗೆ ಶಾರ್ಟ್ ಫಿಲ್ಮ್‌ಗಳಂತೆ ದೊಡ್ಡ ಟ್ರೇಲರ್ ಮಾಡುತ್ತಿದ್ದಾರೆ. ಯಶ್ ಲುಕ್ ಹಾಗೂ ಹಿಂದಿ ಡಬ್ಬಿಂಗ್ ಅಷ್ಟಾಗಿ ಇಷ್ಟವಾಗಲಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಟಾಕ್ಸಿಕ್ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಮತ್ತು ಬಾಲಿವುಡ್‌ನ ದೊಡ್ಡ ತಾರಾಗಣವೇ ಇದೆ. ಆದರೆ ಟ್ರೇಲರ್‌ನಲ್ಲಿ ಸಂಪೂರ್ಣವಾಗಿ ಯಶ್ ಅವರ ಪಾತ್ರದ ಅಬ್ಬರವೇ ಎದ್ದು ಕಾಣುತ್ತಿದ್ದು, ಮಹಿಳಾ ನಟಿಯರ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಚಿತ್ರತಂಡ ಹಾಗೂ ಬಿಡುಗಡೆ ವಿವರ:

ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೂಲವಾಗಿ ಚಿತ್ರೀಕರಿಸಲಾಗಿದ್ದು, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ಬಸ್ರೂರ್ ಅವರ ಸಂಗೀತ ನಿರ್ದೇಶನ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನ ಈ ಚಿತ್ರಕ್ಕಿದ್ದು, ಟಾಕ್ಸಿಕ್ ಸಿನಿಮಾ ಆಗಸ್ಟ್ 26 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular