HomeEntertainment‘ಟಾಕ್ಸಿಕ್’ ಸಿನಿಮಾ ಇಷ್ಟ ಆಗಲಿಲ್ಲ, ಅರ್ಧದಲ್ಲೇ ಎದ್ದು ಬಂದೆ : 'ಬಿಗ್ ಬಾಸ್' ಮಾಜಿ...

‘ಟಾಕ್ಸಿಕ್’ ಸಿನಿಮಾ ಇಷ್ಟ ಆಗಲಿಲ್ಲ, ಅರ್ಧದಲ್ಲೇ ಎದ್ದು ಬಂದೆ : ‘ಬಿಗ್ ಬಾಸ್’ ಮಾಜಿ ಸ್ಪರ್ಧಿಯ ಶಾಕಿಂಗ್ ಹೇಳಿಕೆ.!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ ಪವಿ ಪೂವಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ತಮಗೆ ಅಷ್ಟಾಗಿ ಇಷ್ಟವಾಗಲಿಲ್ಲ ಎಂದು ಅವರು ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಪವಿ ಪೂವಪ್ಪ ಅವರು ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿದ್ದು, ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಮಾತನಾಡಿದ ಅವರು, ಸಿನಿಮಾ ಅಷ್ಟೊಂದು ಇಷ್ಟವಾಗಲಿಲ್ಲ ಎಂದು ಹೇಳಿದ್ದಾರೆ. ಆದರೆ ಚಿತ್ರಕ್ಕಾಗಿ ಇಡೀ ತಂಡ ಸಾಕಷ್ಟು ಶ್ರಮಪಟ್ಟಿದೆ ಮತ್ತು ಎಲ್ಲರೂ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಒಳ್ಳೆಯ ಕೆಲಸ ಮಾಡಿದ್ದಾರೆ. ಇಡೀ ತಂಡ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಎಲ್ಲರೂ ಸಾಕಷ್ಟು ಹಾರ್ಡ್‌ವರ್ಕ್ ಮಾಡಿದ್ದಾರೆ. ಆದರೆ ನನಗೆ ಸಿನಿಮಾ ಇಷ್ಟವಾಗಲಿಲ್ಲ” ಎಂಬರ್ಥದಲ್ಲಿ ಪವಿ ಪೂವಪ್ಪ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟೇ ಅಲ್ಲದೆ, ಸಿನಿಮಾದ ಪರಿಕಲ್ಪನೆ ತಮ್ಮ ಮನಸ್ಸಿಗೆ ಸರಿಯಾಗಿ ಅರ್ಥವಾಗದ ಕಾರಣ ಚಿತ್ರವನ್ನು ಮಧ್ಯದಲ್ಲಿಯೇ ಬಿಟ್ಟು ಹೊರಬಂದಿದ್ದಾಗಿ ಅವರು ಹೇಳಿದ್ದಾರೆ. ಪವಿ ಪೂವಪ್ಪ ಅವರ ಈ ಹೇಳಿಕೆ ಇದೀಗ ‘ಯಶ್’ ಅಭಿಮಾನಿಗಳ ನಡುವೆ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಪವಿ ಪೂವಪ್ಪ ಅವರು ಮುಂಬರುವ ಬಿಗ್‌ಬಾಸ್ ಸೀಸನ್ ಬಗ್ಗೆಯೂ ಕುತೂಹಲ ವ್ಯಕ್ತಪಡಿಸಿದ್ದು, ನಟ ಗಿಲ್ಲಿ ಜೊತೆ ‘ಪಳಾರ್’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

 ಟಾಕ್ಸಿಕ್’ ಸಿನಿಮಾ ಮೆದುಳು, ಜ್ಞಾನ ಇರುವವರಿಗೆ ಮಾತ್ರ ಇಷ್ಟವಾಗುತ್ತೆ; ಮಲಯಾಳಂ ನಟಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರವನ್ನು ಮೆಚ್ಚಿದವರೂ, ಟೀಕಿಸಿದವರೂ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮಲಯಾಳಂ ನಟಿ ಹರ್ಷಿತಾ ಪಿಶಾರೋಡಿ ಅವರು ‘ಟಾಕ್ಸಿಕ್’ ಚಿತ್ರದ ಕುರಿತು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಟಾಕ್ಸಿಕ್’ ಸಿನಿಮಾ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯ ಚಿತ್ರವಲ್ಲ. ಮೆದುಳು ಮತ್ತು ಜ್ಞಾನ ಇರುವವರಿಗೆ ಮಾತ್ರ ಈ ಸಿನಿಮಾ ಇಷ್ಟವಾಗುತ್ತದೆ ಎಂಬರ್ಥದಲ್ಲಿ ಹರ್ಷಿತಾ ಪಿಶಾರೋಡಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಚಿತ್ರದ ಕಥೆ, ನಿರೂಪಣೆ ಹಾಗೂ ಅದರಲ್ಲಿರುವ ವಿಭಿನ್ನ ಅಂಶಗಳನ್ನು ಅರ್ಥಮಾಡಿಕೊಳ್ಳಲು ಪ್ರೇಕ್ಷಕರು ಹೆಚ್ಚು ಗಮನಹರಿಸಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆ ಇದೀಗ ಸಿನಿಪ್ರಿಯರ ನಡುವೆ ಚರ್ಚೆಗೆ ಕಾರಣವಾಗಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಿದ್ದು, ಬಿಡುಗಡೆಯ ನಂತರ ಚಿತ್ರದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ನಟಿಯ ಹೇಳಿಕೆ ಚಿತ್ರತಂಡ ಹಾಗೂ ಯಶ್ ಅಭಿಮಾನಿಗಳ ಗಮನ ಸೆಳೆದಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular