HomeEntertainmentಟಾಕ್ಸಿಕ್ ಕಲೆಕ್ಷನ್ ಬರೀ ಓಳು, ಅವರೇ ನಕಲಿ ಟಿಕೆಟ್ ಬುಕ್ ಮಾಡಿ ಹವಾ ಎಬ್ಬಿಸಿದ್ದಾರೆ ಅಷ್ಟೇ;...

ಟಾಕ್ಸಿಕ್ ಕಲೆಕ್ಷನ್ ಬರೀ ಓಳು, ಅವರೇ ನಕಲಿ ಟಿಕೆಟ್ ಬುಕ್ ಮಾಡಿ ಹವಾ ಎಬ್ಬಿಸಿದ್ದಾರೆ ಅಷ್ಟೇ; ವಿಡಿಯೊ ಹರಿಬಿಟ್ಟ ತೆಲುಗು ಯುಟ್ಯೂಬರ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ಬೆಳ್ಳಿ ತೆರೆಗೆ ಚಿತ್ರ ಅಪ್ಪಳಿಸಲಿದೆ. ಚಿತ್ರದ ಟ್ರೈಲರ್, ಟೀಸರ್‌ಗಳು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಮೊದಲ ದಿನವೇ ಟಾಕ್ಸಿಕ್ ಚಿತ್ರವನ್ನು ನೋಡಿಬಿಡಬೇಕು ಎಂದು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದಾರೆ.

ಹೀಗೆ ದೊಡ್ಡ ಮಟ್ಟದ ಬೇಡಿಕೆ ಹುಟ್ಟುಹಾಕಿರುವ ಟಾಕ್ಸಿಕ್ ಚಿತ್ರದ ಟಿಕೆಟ್‌ ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಈಗಾಗಲೇ 40 ಕೋಟಿ ಗಳಿಕೆ ಮಾಡಿದೆ ಎಂಬ ವರದಿಗಳು ಹರಿದಾಡುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಕೆಲವರು ಈ ಲೆಕ್ಕಾಚಾರಗಳು ಸುಳ್ಳು ಎಂದು ವಾದಿಸಿದ್ದು, ಕಾರ್ಪೋರೇಟ್ ಬುಕಿಂಗ್ ಮಾಡಿಸಿ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸುವ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ. ಇದೀಗ ತೆಲುಗಿನ ಯುಟ್ಯೂಬರ್ ಓರ್ವ ಈ ಕುರಿತು ವಿಡಿಯೊ ಮಾಡಿದ್ದು, ಸೀಟ್‌ಗಳನ್ನು ಬೇಕಂತಲೆ ಬ್ಲಾಕ್ ಮಾಡಿಸಲಾಗಿದ್ದು, ನಕಲಿ ಟಿಕೆಟ್ ಬುಕಿಂಗ್ ನಡೆದಿದೆ ಎಂದಿದ್ದಾನೆ.

ಚಿತ್ರ ಭಾರತದಲ್ಲಿ ಒಟ್ಟು 27.55 ಕೋಟಿ ರೂಪಾಯಿಗಳನ್ನು ಅಡ್ವಾನ್ಸ್ ಬುಕಿಂಗ್‌ನಿಂದಲೇ ಗಳಿಸಿದೆ ಎನ್ನಲಾಗುತ್ತಿದೆ, ಆದರೆ ಇದರಲ್ಲಿ ನಿಜವಾದ ಬುಕಿಂಗ್ 18.99 ಕೋಟಿ ಮಾತ್ರವೇ, ಇನ್ನುಳಿದ 8.56 ಕೋಟಿ ಬ್ಲಾಕ್ ಸೀಟ್‌ಗಳಿವೆ ( ಬೇಕಂತಲೇ ಮಾಡಿಸಿದ ಬುಕಿಂಗ್ ) ಎಂದು ಹೇಳಿದ್ದಾನೆ. ಈ 18.99 ಕೋಟಿಯಲ್ಲೂ ಸಹ ಕಾರ್ಪೋರೇಟ್ ಬುಕಿಂಗ್ ಮಾಡಿಸಲಾಗಿದ್ದು, ನನ್ನ ಪ್ರಕಾರ ಕನಿಷ್ಟ 8 ಕೋಟಿ ಕಾರ್ಪೋರೇಟ್ ಬುಕಿಂಗ್ ಇದೆ, ಹೀಗಾಗಿ ನಿಜವಾದ ಕಲೆಕ್ಷನ್ ಕೇವಲ 11 ಕೋಟಿ ಮಾತ್ರ ಎಂದಿದ್ದಾನೆ. ಹೀಗೆ ಟಾಕ್ಸಿಕ್ ಕುರಿತು ಹರಿದಾಡುತ್ತಿರುವ ಕೋಟಿ ಕೋಟಿ ಕಲೆಕ್ಷನ್ ಸುಳ್ಳು ಎಂದು ಈತ ಹೇಳಿದ್ದಾನೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular