HomeBusinessನಿಮ್ಮ ಹಣಕ್ಕೆ ಸಿಗಲಿದೆ ಡಬಲ್ ಧಮಾಕಾ: 444 ದಿನಗಳ ಎಫ್‌ಡಿಯಲ್ಲಿ ಯಾವ ಬ್ಯಾಂಕ್ ಬೆಸ್ಟ್? ಇಲ್ಲಿದೆ...

ನಿಮ್ಮ ಹಣಕ್ಕೆ ಸಿಗಲಿದೆ ಡಬಲ್ ಧಮಾಕಾ: 444 ದಿನಗಳ ಎಫ್‌ಡಿಯಲ್ಲಿ ಯಾವ ಬ್ಯಾಂಕ್ ಬೆಸ್ಟ್? ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಬೆಂಗಳೂರು: ನೀವು ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿ ಇಟ್ಟು, ಹೆಚ್ಚಿನ ಲಾಭ ಪಡೆಯಲು ಬಯಸುತ್ತೀರಾ? ಹಾಗಾದ್ರೆ ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ನಿಮಗಾಗಿ ಒಂದು ಸ್ಪೆಷಲ್ ಆಫರ್ ತಂದಿವೆ. ಕೇವಲ 444 ದಿನಗಳ ಅವಧಿಗೆ ಹಣ ಹೂಡಿಕೆ ಮಾಡುವ ಮೂಲಕ ನೀವು ಸಾಮಾನ್ಯ ಎಫ್‌ಡಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

ಏನಿದು 444 ದಿನಗಳ ಎಫ್‌ಡಿ ಸ್ಪೆಷಾಲಿಟಿ?

ಬ್ಯಾಂಕುಗಳು ಗ್ರಾಹಕರನ್ನು ಸೆಳೆಯಲು ಇಂತಹ ನಿರ್ದಿಷ್ಟ ದಿನಗಳ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತವೆ. ಇಲ್ಲಿ ಸಾಮಾನ್ಯ ಉಳಿತಾಯ ಯೋಜನೆಗಳಿಗಿಂತ ಬಡ್ಡಿದರ ಹೆಚ್ಚಿರುತ್ತದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ಬೋನಸ್ ಬಡ್ಡಿ ಕೂಡ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಪ್ 4 ಸರ್ಕಾರಿ ಬ್ಯಾಂಕುಗಳ ಬಡ್ಡಿದರ ಪಟ್ಟಿ ಇಲ್ಲಿದೆ:

1.ಇಂಡಿಯನ್ ಬ್ಯಾಂಕ್ (Indian Bank):

ಸದ್ಯ ಮಾರುಕಟ್ಟೆಯಲ್ಲಿ ಇವರದ್ದೇ ಹವಾ ಇಂಡ್ ಸೆಕ್ಯೂರ್ ಯೋಜನೆಯಡಿ ಅತಿ ಹೆಚ್ಚು ಬಡ್ಡಿ ನೀಡುತ್ತಿದ್ದಾರೆ.

ಸಾಮಾನ್ಯರಿಗೆ: 6.60%

ಹಿರಿಯ ನಾಗರಿಕರಿಗೆ: 7.10%

ಸೂಪರ್ ಹಿರಿಯ ನಾಗರಿಕರಿಗೆ (80+): 7.35%

2.ಕೆನರಾ ಬ್ಯಾಂಕ್ (Canara Bank):
ನಮ್ಮ ಹೆಮ್ಮೆಯ ಕೆನರಾ ಬ್ಯಾಂಕ್ ಕೂಡ ಸ್ಪರ್ಧೆಯಲ್ಲಿದೆ.

ಸಾಮಾನ್ಯರಿಗೆ: 6.50%

ಹಿರಿಯ ನಾಗರಿಕರಿಗೆ: 7.00%

3.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI):
ಎಸ್‌ಬಿಐ ಈ ಯೋಜನೆಯನ್ನು ಅಮೃತ್ ವೃಷ್ಟಿ ಎಂಬ ಹೆಸರಿನಲ್ಲಿ ನಡೆಸುತ್ತಿದೆ.

ಸಾಮಾನ್ಯರಿಗೆ: 6.45%

ಹಿರಿಯ ನಾಗರಿಕರಿಗೆ: 6.95%

4.ಬ್ಯಾಂಕ್ ಆಫ್ ಬರೋಡಾ (Bank of Baroda):
ಇವರ ಬಾಬ್ ಸ್ಕ್ವೇರ್ ಡ್ರೈವ್ ಯೋಜನೆ 3 ಕೋಟಿವರೆಗಿನ ಠೇವಣಿಗೆ ಅನ್ವಯಿಸುತ್ತದೆ.

ಸಾಮಾನ್ಯರಿಗೆ: 6.45%

ಹಿರಿಯ ನಾಗರಿಕರಿಗೆ: 6.95%

ಹೂಡಿಕೆದಾರರು ಮರೆಯಬಾರದ ಹೊಸ ನಿಯಮ:

ನೀವು ಏಪ್ರಿಲ್ 1, 2026 ರ ನಂತರ ಹೂಡಿಕೆ ಮಾಡುತ್ತಿದ್ದರೆ ಒಂದು ಮುಖ್ಯ ಬದಲಾವಣೆ ಗಮನಿಸಿ. ಈ ಹಿಂದೆ ಟಿಡಿಎಸ್ (TDS) ತಪ್ಪಿಸಲು ಬಳಸುತ್ತಿದ್ದ 15G/15H ಫಾರ್ಮ್‌ಗಳ ಬದಲಿಗೆ, ಈಗ ಹೊಸ ಏಕೀಕೃತ ಫಾರ್ಮ್ 121′ (Form 121) ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular