HomeAgricultureತೊಗರಿಯ ಗೊಡ್ಡುರೋಗದ ನಿರ್ವಹಣೆಗೆ ಇಲ್ಲಿದೆ ಸಲಹೆ

ತೊಗರಿಯ ಗೊಡ್ಡುರೋಗದ ನಿರ್ವಹಣೆಗೆ ಇಲ್ಲಿದೆ ಸಲಹೆ

ರಾಯಚೂರಿನ ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿಯಲ್ಲಿ ಗೊಡ್ಡುರೋಗದ ನಿರ್ವಹಣೆಗಾಗಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ತಿಳಿಸಿದ್ದಾರೆ.

ಬಾಧೆಯ ಲಕ್ಷಣಗಳು: ಈ ರೋಗಕ್ಕೆ ತುತ್ತಾಗಿರುವ ಗಿಡದ ಎಲೆಗಳು ಹಸಿರು ಮತ್ತು ಹಳದಿ ಬಣ್ಣಕ್ಕೆ ತಿರುಗಿ ಮೊಸಾಯಿಕ್ ಲಕ್ಷಣಗಳು ಕಂಡುಬರುತ್ತವೆ. ಗಿಡದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಗಳು ಹೊಂದಿ ಈ ಗಿಡಗಳು ಹೂ ಮತ್ತು ಕಾಯಿಗಳಾಗದೇ ಹಸಿರಾಗಿದ್ದು, ಗಿಡಗಳು ಗೊಡ್ಡಾಗುತ್ತವೆ. ರೋಗದಿಂದಾಗಿ ಗಿಡದ ಕಾಂಡಗಳು ಬೆಳೆಯದೇ ಸಣ್ಣ ಟೊಂಗೆಗಳಾಗಿ, ಎಲೆಗಳ ಬೆಳೆವಣಿಗೆ ಕುಂಠಿತವಾಗಿ ಎಲೆಗಳು ಮುಟುರಿಕೊಳ್ಳುತ್ತವೆ.

ನಿರ್ವಹಣೆ: ಬಾಧಿತ ಗಿಡಗಳನ್ನು ಕಿತ್ತು ಒಂದು ಗೋಣಿ ಚೀಲದಲ್ಲಿ ಸಂಗ್ರಹಿಸಿ ಹೊಲದಿಂದ ಬೇರೆಡೆ ಒಯ್ದು ಭೂಮಿಯಲ್ಲಿ ಹುಗಿದುಬಿಡಿ. ನುತಿ ನಾಶಕ ಅಥವಾ ನೀರಿನಲ್ಲಿ ಕರಗುವ ಗಂಧಕ @3ಗ್ರಾಂ ಜೊತೆಗೆ ಸ್ಯಾಂಡೋವಿಟ್ @ 1ಮಿ.ಲೀ ಪ್ರತಿ ಲೀ ನೀರಿಗೆ ಸೇರಿಸಿ ಚೆನ್ನಾಗಿ ಸಿಂಪಡಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಆಯಾ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular