HomeEntertainmentಹುಟ್ಟು ಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ

ಟಾಲಿವುಡ್ ನ ಹಿರಿಯ ನಟ ನಾಗಾರ್ಜುನ ಇಂದು 65ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ

1986ರಲ್ಲಿ ತೆರೆ ಕಂಡ ವಿ ಮದುಸೂದನರಾವ್ ನಿರ್ದೇಶನದ ‘ವಿಕ್ರಂ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ‘ಕ್ಯಾಪ್ಟನ್ ನಾಗಾರ್ಜುನ್’ ನಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಅರಣ್ಯ ಕಾಂಡ’  ‘ಮಜ್ನು’ ‘ಸಂಕೀರ್ತನ’  ‘ಕಲೆಕ್ಟರ್ ಗರಿ ಅಬ್ಬಾಯಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯ ನಟನಾಗಿ ಹೊರಹೊಮ್ಮಿದರು.

ನಟ ನಾಗಾರ್ಜುನ ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗ ಸೇರಿದಂತೆ ಒಟ್ಟಾರೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. 2022ರಂದು ಬಿಡುಗಡೆಯಾದ ‘ದಿ ಗೋಸ್ಟ್’ ನಲ್ಲಿ ಕೊನೆಯದಾಗಿ  ಕಾಣಿಸಿಕೊಂಡಿದ್ದ, ನಾಗಾರ್ಜುನ ಇತ್ತೀಚಿಗೆ ವಿಜಯ್ ಬಿನ್ನಿ ನಿರ್ದೇಶನದ ‘ನಾ ಸಾಮಿ ರಂಗ’ ಚಿತ್ರದಲ್ಲಿ ಅಭಿನಯಿಸಿದ್ದರು. ಇತ್ತೀಚಿಗೆ ‘ಕುಬೇರ’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular