ಟೋಕಿಯೊ: ಜಗತ್ತಿನಾದ್ಯಂತ ಇಂದು ಸುಶಿ (Sushi) ಅಂದ್ರೆ ಫುಡ್ ಲವರ್ಸ್‌ಗೆ ಅಚ್ಚುಮೆಚ್ಚು. ಸೂಪರ್ ಮಾರ್ಕೆಟ್‌ನಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲ್‌ಗಳವರೆಗೆ ಸುಶಿ ಸಿಗಬಹುದು. ಆದರೆ, ಜಪಾನ್‌ನ ಟೋಕಿಯೊ ನಗರವನ್ನು ಇಂದಿಗೂ ವಿಶ್ವದ ಸುಶಿ ಕ್ಯಾಪಿಟಲ್ ಅಂತಾನೇ ಕರೆಯುತ್ತಾರೆ. ಹಾಗಾದ್ರೆ ಈ ನಗರದ ಸುಶಿಯಲ್ಲಿ ಅಂತಹ ವಿಶೇಷತೆ ಏನಿದೆ? ತಿಳಿಯೋಣ ಬನ್ನಿ.
ಸುಶಿ ಎಂದರೆ ಒಂದು ಕಲೆ
ಜಪಾನಿಯರಿಗೆ ಸುಶಿ ಎಂದರೆ ಕೇವಲ ಆಹಾರವಲ್ಲ, ಅದೊಂದು ಕಲೆ. ಅನ್ನದ ತಾಪಮಾನ, ಮೀನಿನ ಸ್ಲೈಸ್ ಮಾಡುವ ರೀತಿ ಮತ್ತು ಅದನ್ನು ಬಡಿಸುವ ಕ್ರಮ – ಪ್ರತಿಯೊಂದರಲ್ಲೂ ಒಂದು ಶಿಸ್ತು ಮತ್ತು ಸಂಸ್ಕೃತಿ ಅಡಗಿದೆ.ಒಟ್ಟಾರೆಯಾಗಿ ಹೇಳುವುದಾದರೆ, ನೀವು ನಿಜವಾದ ಮತ್ತು ಅತ್ಯುತ್ತಮ ಸುಶಿ ಸವಿಯಬೇಕೆಂದರೆ ಟೋಕಿಯೊಗೆ ಒಮ್ಮೆ ಭೇಟಿ ನೀಡಲೇಬೇಕು
ದಶಕಗಳ ಕಾಲದ ಕಠಿಣ ತರಬೇತಿ
ಟೋಕಿಯೊದ ಸುಶಿ ಮಾಸ್ಟರ್‌ಗಳನ್ನು ಇಟಾಮೇ (Itamae) ಎಂದು ಕರೆಯಲಾಗುತ್ತದೆ. ಇಲ್ಲಿ ಸುಶಿ ಚೆಫ್ ಆಗುವುದು ಸುಲಭದ ಮಾತಲ್ಲ. ಒಬ್ಬ ವ್ಯಕ್ತಿ ವೃತ್ತಿಪರವಾಗಿ ಸುಶಿ ತಯಾರಿಸಲು ಕನಿಷ್ಠ 10 ವರ್ಷಗಳ ಕಾಲ ಕಠಿಣ ತರಬೇತಿ ಪಡೆಯಬೇಕಾಗುತ್ತದೆ. ಅನ್ನದ ಹದದಿಂದ ಹಿಡಿದು, ಮೀನು ಕತ್ತರಿಸುವ ಕಲೆಯವರೆಗೆ ಇಲ್ಲಿ ಪರಿಪೂರ್ಣತೆಗೆ (Perfection) ಮೊದಲ ಆದ್ಯತೆ.
ಸಮುದ್ರದಿಂದ ನೇರವಾಗಿ ತಟ್ಟೆಗೆ
ಟೋಕಿಯೊದ ಸುಶಿ ಇಷ್ಟೊಂದು ಫೇಮಸ್ ಆಗಲು ಅಲ್ಲಿನ ಟೊಯೊಸು (Toyosu) ಮೀನು ಮಾರುಕಟ್ಟೆಯೇ ಕಾರಣ. ಇದು ವಿಶ್ವದ ಅತಿದೊಡ್ಡ ಸಮುದ್ರ ಆಹಾರದ ಮಾರುಕಟ್ಟೆ. ಪ್ರತಿದಿನ ಮುಂಜಾನೆ ಸಮುದ್ರದಿಂದ ಹಿಡಿದು ತಂದ ತಾಜಾ ಮೀನುಗಳು ಇಲ್ಲಿನ ರೆಸ್ಟೋರೆಂಟ್‌ಗಳಿಗೆ ತಲುಪುತ್ತವೆ. ತಾಜಾತನವೇ ಇಲ್ಲಿನ ಅಸಲಿ ಸೀಕ್ರೆಟ್!
ಸುಶಿ ಹುಟ್ಟಿದ್ದೇ ಇಲ್ಲಿ
ನಾವಿಂದು ತಿನ್ನುವ ಆಧುನಿಕ ಸುಶಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇ ಟೋಕಿಯೊದಲ್ಲಿ. 1603-1868ರ ಅವಧಿಯಲ್ಲಿ ಇದನ್ನು ಎಡೋಮೇ ಸುಶಿ ಎಂದು ಕರೆಯಲಾಗುತ್ತಿತ್ತು. ಅಂದು ಇದು ರಸ್ತೆ ಬದಿಯ ಫಾಸ್ಟ್ ಫುಡ್ ಆಗಿ ಜನಪ್ರಿಯವಾಗಿತ್ತು ಎಂಬುದು ವಿಶೇಷ.
ಮಿಚೆಲಿನ್ ಸ್ಟಾರ್‌ಗಳ ಅಡ್ಡೆ
ವಿಶ್ವದಲ್ಲೇ ಅತಿ ಹೆಚ್ಚು ಮಿಚೆಲಿನ್ ಸ್ಟಾರ್ ರೆಸ್ಟೋರೆಂಟ್‌ಗಳನ್ನು ಹೊಂದಿರುವ ಕೀರ್ತಿ ಟೋಕಿಯೊಗೆ ಸಲ್ಲುತ್ತದೆ. ಸಣ್ಣ ಗಲ್ಲಿಗಳಲ್ಲಿರುವ ಸುಶಿ ಸೆಂಟರ್‌ಗಳಿಂದ ಹಿಡಿದು ಹೈ-ಫೈ ಹೋಟೆಲ್‌ಗಳವರೆಗೆ ಎಲ್ಲವೂ ಕ್ವಾಲಿಟಿಯಲ್ಲಿ ನಂಬರ್ ಒನ್
ಶ್ರೀಮಂತರಿಗೂ ಸೈ, ಬಡವರಿಗೂ ಜೈ
ಟೋಕಿಯೊ ಸುಶಿ ಅಂದ್ರೆ ಬರೀ ಕಾಸ್ಲಿ ಅಂತ ಅಂದುಕೋಬೇಡಿ. ಇಲ್ಲಿ ಐಷಾರಾಮಿ ‘ಓಮಕಾಸೆ’ (ಚೆಫ್ ನೀಡುವ ವಿಶೇಷ ಊಟ) ಕೂಡ ಸಿಗುತ್ತದೆ, ಹಾಗೆಯೇ ಬಜೆಟ್ ಫ್ರೆಂಡ್ಲಿ ಆದ ‘ಕನ್ವೇಯರ್ ಬೆಲ್ಟ್ ಸುಶಿ’ ಕೇಂದ್ರಗಳೂ ಇವೆ. ಎಲ್ಲರಿಗೂ ಒಪ್ಪುವ ಸುಶಿ ಇಲ್ಲಿ ಲಭ್ಯ.

