HomeLive Newsಇಂದು ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ ಟ್ವೆಂಟಿ ಸಮರ

ಇಂದು ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ ಟ್ವೆಂಟಿ ಸಮರ

ಮೊನ್ನೆ ನಡೆದ ಜಿಂಬಾಬ್ವೆ ಮತ್ತು ಶ್ರೀಲಂಕಾ ನಡವಣ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕೊನೆಯ ಓವರ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ನಾಲ್ಕು ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿ ಸಮಬಲಗೊಂಡಿದ್ದು, ಇಂದು ಎರಡು ತಂಡಗಳು ಸರಣಿ ವಶಪಡಿಸಿಕೊಳ್ಳಲು ಭರ್ಜರಿ ಹೋರಾಟ ನಡೆಸಲಿವೆ.

ಜಿಂಬಾಬ್ವೆ ತಂಡದ ಯುವ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚುತ್ತಿದ್ದು,  ಶ್ರೀಲಂಕಾ ತಂಡಕ್ಕೆ ಟಕ್ಕರ್ ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆ  ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ. ಇಂದು ಕೊಲಂಬೋದಲ್ಲಿ  ಟಿ 20 ಪಂದ್ಯ ನಡೆಯಲಿದ್ದು,  ರಾತ್ರಿ 7:00 ಗಂಟೆಗೆ ಪಂದ್ಯ ಪ್ರಸಾರವಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular