HomeAstroಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭದಿನ

ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭದಿನ

ಮೇಷ ರಾಶಿ

ಸಂಪತ್ತಿನ ವಿಷಯದಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ಮಾನಸಿಕ ವ್ಯಗ್ರತೆ ಮತ್ತು ಶಾರೀರಿಕ ಅಸ್ವಸ್ಥತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಸಮಯ ಅಷ್ಟು ಅನುಕೂಲಕರವಾಗಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್ಥಿಕ ವಿಷಯಗಳಿಗೆ ಹೆಚ್ಚಿನ ಗಮನಹರಿಸುತ್ತೀರಿ. ನಿಮಗೆ ಸಫಲತೆ ಕೂಡ ಸಿಗಲಿದೆ. ಭಾಗ್ಯವೃದ್ಧಿಯ ಯೋಗವಿದೆ, ಒಡಹುಟ್ಟಿದವರು ಮತ್ತು ಸಂಬಂಧಿಕರ ಸಹಕಾರ ಸಿಗಲಿದೆ. ಪ್ರಿಯ ವ್ಯಕ್ತಿಗಳ ಸಹಕಾರ ಮತ್ತು ಸಾರ್ವಜನಿಕ ಗೌರವ ದೊರೆಯುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ.

ಮಿಥುನ ರಾಶಿ

ಹಣಕಾಸಿನ ಯೋಜನೆ ಸಫಲವಾಗಲಿದೆ. ಮೃಷ್ಟಾನ್ನ ಭೋಜನ ಯೋಗವಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿಲ್ಲ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವ್ಯಾಪಾರದಲ್ಲಿ ಅನುಕೂಲಕರ ಸ್ಥಿತಿ ಇರಲಿದೆ. ಆದಾಯ ವೃದ್ಧಿಯಾಗಲಿದೆ.

ಕರ್ಕ ರಾಶಿ

ಇವತ್ತು ಹೆಚ್ಚು ಭಾವುಕರಾಗಲಿದ್ದೀರಿ. ಕುಟುಂಬದವರು, ಮಿತ್ರರು, ಸಂಬಂಧಿಕರೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತೀರಿ. ಸ್ವಾದಿಷ್ಟ ಭೋಜನ ದೊರೆಯಲಿದೆ, ಹೊರಗೆ ಸುತ್ತಾಡಲು ತೆರಳಲಿದ್ದೀರಿ.

ಸಿಂಹ ರಾಶಿ

ವಂಚನೆ, ಸಂಘರ್ಷ, ವಾದ-ವಿವಾದದ ಸ್ಥಿತಿ ಎದುರಾಗಬಹುದು. ಕೋರ್ಟ್ ಕಚೇರಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಿ. ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇರಲಿ. ಆದಾಯ ವೃದ್ಧಿಸುವುದಿಲ್ಲ, ಆದ್ರೆ ಖರ್ಚಯ ಹೆಚ್ಚಾಗಲಿದೆ.

ಕನ್ಯಾ ರಾಶಿ

ಉದ್ಯೋಗಿಗಳಿಗೆ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ದೊರೆಯಲಿದೆ. ಪತ್ನಿ, ಪುತ್ರ ಮತ್ತು ಹಿರಿಯರಿಂದ ಅನುಕೂಲವಾಗಲಿದೆ. ಮಿತ್ರರೊಂದಿಗೆ ರಮಣೀಯ ಕ್ಷೇತ್ರಕ್ಕೆ ಪ್ರವಾಸ ಮಾಡಲಿದ್ದೀರಿ. ಸ್ತ್ರೀ ಮಿತ್ರರಿಂದ ಲಾಭವಿದೆ.

ತುಲಾ ರಾಶಿ

ಕಚೇರಿಯಲ್ಲಿ ಪದೋನ್ನತಿ ಮತ್ತು ಆದಾಯ ವೃದ್ಧಿಯ ಯೋಗವಿದೆ. ಗೃಹಾಲಂಕಾರ ಮಾಡಲಿದ್ದೀರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳಲಿದ್ದಾರೆ. ಅವರು ನಿಮಗೆ ಪ್ರೇರಣೆಯಾಗಲಿದ್ದಾರೆ.

ವೃಶ್ಚಿಕ ರಾಶಿ

ಕೆಲಸ ಮತ್ತು ವ್ಯಾಪಾರದಲ್ಲಿ ಅಡಚಣೆಗಳು ಎದುರಾಗಬಹುದು. ಹಿರಿಯ ಅಧಿಕಾರಿಗಳೊಂದಿಗೆ ವಿನಾಕಾರಣ ವಾದ ವಿವಾದದಲ್ಲಿ ತೊಡಗಿಕೊಳ್ಳಬೇಡಿ. ವಿದೇಶ ಪ್ರಯಾಣ ಕೈಗೊಳ್ಳುವ ಅವಕಾಶ ಸಿಗಬಹುದು.

ಧನು ರಾಶಿ

ಇಂದು ಮಾತು ಮತ್ತು ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಅನಾಹುತವಾಗಬಹುದು. ನೆಗಡಿ ಮತ್ತು ಕಫದಿಂದಾಗಿ ಆರೋಗ್ಯ ಹದಗೆಡಬಹುದು. ಮಾನಸಿಕ ವ್ಯಗ್ರತೆಯ ಅನುಭವವಾಗಲಿದೆ. ಹಣ ಖರ್ಚಾಗಲಿದೆ.

ಮಕರ ರಾಶಿ

ದಲಾಲಿ, ವ್ಯಾಜ್ಯ ಮತ್ತು ಕಮಿಷನ್ ನಿಂದ ನಿಮ್ಮ ಆದಾಯ ಹೆಚ್ಚಲಿದೆ. ಪಾಲುದಾರಿಕೆಯಿಂದ ಲಾಭವಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲಿದೆ. ಯಾತ್ರೆ ಕೈಗೊಳ್ಳುವ ಸಂಭವವಿದೆ.

ಕುಂಭ ರಾಶಿ

ಇವತ್ತು ಕೈಗೊಂಡ ಕಾರ್ಯದಲ್ಲಿ ಯಶಸ್ಸು ಮತ್ತು ಕೀರ್ತಿ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ವಿಚಾರ ಮತ್ತು ವ್ಯವಹಾರದಲ್ಲಿ ಭಾವುಕತೆ ಹೆಚ್ಚಾಗಿರುತ್ತದೆ.

ಮೀನ ರಾಶಿ

ವಿದ್ಯಾರ್ಥಿಗಳಿಗೆ ಶುಭದಿನ. ಪ್ರೇಮಿ ಮತ್ತು ಪ್ರಿಯವ್ಯಕ್ತಿಗಳ ಸಾನಿಧ್ಯ ಸಿಗಲಿದೆ. ಕಾಮುಕತೆ ಅಧಿಕವಾಗಿರಲಿದೆ. ದೃಢಚಿತ್ತದಿಂದ ಇರುವುದು ಒಳಿತು.

For Latest News Updates, Join Our Whatsapp Community🚩
RELATED ARTICLES

Most Popular