HomeEntertainmentಇಂದು ನಟ ಕಾಶಿನಾಥ್ ಜನ್ಮದಿನ

ಇಂದು ನಟ ಕಾಶಿನಾಥ್ ಜನ್ಮದಿನ

2018 ಜನವರಿ 16ರಂದು ನಿಧನರಾದ ಖ್ಯಾತ ಹಿರಿಯ ನಟ ಕಾಶಿನಾಥ್ ಅವರ ವಿಭಿನ್ನ ಸಿನಿಮಾಗಳು ಇಂದಿಗೂ ಎಲ್ಲರ ಮನೆ ಮಾತಾಗಿವೆ. ಇಂದು ಕಾಶಿನಾಥ್ ಅವರ ಜನ್ಮದಿನವಾಗಿದ್ದು, ಹಲವಾರು ಹಿರಿಯ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಾಶಿನಾಥ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ.

ಕಾಶಿನಾಥ್ 1976 ರಲ್ಲಿ ‘ಅಪರೂಪದ ಅತಿಥಿಗಳು’ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಿನಿಮಾರಂಗಕ್ಕೆ  ಪಾದರ್ಪಣೆ ಮಾಡಿದರು. 1982 ರಂದು ‘ಅಮರ ಮಧುರ ಪ್ರೇಮ’ ದಲ್ಲಿ ನಾಯಕನಾಗಿ ಅಭಿನಯಿಸಿದರು. ಬಳಿಕ ‘ಅನುಭವ’ ‘ಅವಳೇ ನನ್ನ ಹೆಂಡ್ತಿ’ ‘ಅನಂತನ ಅವಾಂತರ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು. 2017ರಲ್ಲಿ ಚೌಕ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರಿಗೆ ಬೆಸ್ಟ್  ಸಪೋರ್ಟಿಂಗ್ ಆಕ್ಟರ್ ಎಂಬ ಸೈಮ ಅವಾರ್ಡ್ ದೊರೆಯಿತು. ಇದಾದ ಬಳಿಕ ಕೆಲವೇ ದಿನಗಳಲ್ಲಿ ಕಾಶಿನಾಥ್ ನಿಧನರಾದರು.

For Latest News Updates, Join Our Whatsapp Community🚩
RELATED ARTICLES

Most Popular