HomeAstroಕಷ್ಟಗಳಿಂದ ಮುಕ್ತಿ ಹೊಂದಲು ಸಂಕಷ್ಟಹರ ಚತುರ್ಥಿ ಮರು ದಿನದಿಂದ 3 ದಿನಗಳ ಕಾಲ ಮಾಡಿ ಈ...

ಕಷ್ಟಗಳಿಂದ ಮುಕ್ತಿ ಹೊಂದಲು ಸಂಕಷ್ಟಹರ ಚತುರ್ಥಿ ಮರು ದಿನದಿಂದ 3 ದಿನಗಳ ಕಾಲ ಮಾಡಿ ಈ ಪೂಜೆ

ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವದ ಸ್ಥಾನವಿದೆ. ಇದರಲ್ಲಿ ಔಷಧೀಯ ಗುಣಗಳಿವೆ, ಇದನ್ನು ದೇವರ ಪೂಜೆಗೆ ಕೂಡ ಬಳಸುತ್ತಾರೆ. ಈ ಗಿಡವನ್ನು ಪೂಜಿಸುವುದರಿಂದ ಹಲವು ಶುಭ ಫಲಗಳನ್ನು ಕಾಣಬಹುದು. ಹಾಗಾಗಿ ಸಂಕಷ್ಟಹರ ಚತುರ್ಥಿ ಮರುದಿನದಿಂದ 3 ದಿನಗಳ ಕಾಲ ಎಕ್ಕೆ ಗಿಡಕ್ಕೆ ಹೀಗೆ ಪೂಜೆ ಮಾಡಿದರೆ ನಿಮ್ಮ ಕಷ್ಟಗಳು ತೊಲಗಿಹೋಗುತ್ತದೆ.

ಎಕ್ಕದ ಗಿಡದಲ್ಲಿ ಗಣಪತಿ ವಾಸವಾಗಿರುತ್ತಾನೆ ಎಂದು ಹಿಂದೂಪುರಾಣಗಳಲ್ಲಿ ತಿಳಿಸಲಾಗಿದೆ. ಹಾಗಾಗಿ ಈ ಗಿಡವನ್ನು ಈ ರೀತಿ ಪೂಜಿಸಿದರೆ ಜೀವನದಲ್ಲಿ ಎದುರಾದ ಕಷ್ಟಗಳು ತೊಲಗಿ ಹೋಗುತ್ತದೆ. ಬಿಳಿ ಎಕ್ಕದ ಗಿಡವನ್ನು ಸೂರ್ಯ ಹುಟ್ಟುವ ಮುನ್ನ 3 ದಿನಗಳ ಕಾಲ ಪೂಜಿಸಿ. ಬೆಳಿಗ್ಗೆ 4 ಗಂಟೆಯಿಂದ 6 ಗಂಟೆಯೊಳಗೆ ಅರಶಿನದಿಂದ ಅಕ್ಷತೆ ತಯಾರಿಸಿ, ಅರಶಿನ ಬಣ್ಣದ ಹೂಗಳನ್ನು ತಂದಿಟ್ಟುಕೊಳ್ಳಿ. ಮೊದಲಿಗೆ ಗಿಡಕ್ಕೆ ನೀರನ್ನು ಹಾಕಿ ಅದಕ್ಕೆ ಅರಶಿನ ಕುಂಕುಮ ಹಚ್ಚಿ ಹೂವನ್ನು ಹಾಕಿ ಅಕ್ಷತೆ ಕಾಳನ್ನು ಹಾಕಿ ಸಂಕಲ್ಪ ಮಾಡಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಉಳಿದಂತಹ ಅಕ್ಷತೆ ಕಾಳುಗಳನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಇದನ್ನು ಸಂಕಷ್ಟಹರ ಚತುರ್ಥಿ ದಿನದ ಮರುದಿನದಿಂದ ಪ್ರಾರಂಭಿಸಿ 3 , 5, 9, 21 ದಿನ ಮಾಡಬಹುದು. ಇದರಿಂದ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ದೊರೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular