HomeIndia2025ರಲ್ಲಿ ತಿರುಪತಿ ಲಡ್ಡು ಮಾರಾಟದಲ್ಲಿ ದಾಖಲೆ, ಒಂದು ದಿನ ಎಷ್ಟು ಮಾರಾಟ?

2025ರಲ್ಲಿ ತಿರುಪತಿ ಲಡ್ಡು ಮಾರಾಟದಲ್ಲಿ ದಾಖಲೆ, ಒಂದು ದಿನ ಎಷ್ಟು ಮಾರಾಟ?

ತಿರುಮಲ ತಿರುಪತಿ ದೇವಾಲಯ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಆಂಧ್ರ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಪ್ರತಿವರ್ಷ ಕೋಟ್ಯಾಂತರ ಭಕ್ತರು ಭೇಟಿ ನೀಡುತ್ತಾರೆ. ದೇಶ-ವಿದೇಶದಲ್ಲಿ ತಿರುಪತಿ ಶ್ರೀ ವೆಂಕಟರಮಣ ಸ್ವಾಮಿಗೆ ಭಕ್ತರ ವರ್ಗವಿದೆ.

ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಪ್ರಸಾದ ರೂಪದಲ್ಲಿ ಲಡ್ಡು ತೆಗೆದುಕೊಂಡು ಬರುತ್ತಾರೆ. ಈ ಲಡ್ಡು ತಯಾರಿಕೆ, ಮಾರಾಟ ಒಂದು ಬಹುದೊಡ್ಡ ಉದ್ಯಮವಾಗಿದೆ. ವಾರ್ಷಿಕ ಕೋಟ್ಯಾಂತರ ರೂಪಾಯಿ ವಹಿವಾಟು ಇದರದಲ್ಲಿ ಅಡಗಿದೆ.

2024ರಲ್ಲಿ ತಿರುಪತಿ ಲಡ್ಡು ತಯಾರಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ಲಡ್ಡು ತಯಾರಿಕೆಯಲ್ಲಿ ಬಳಸಲಾಗುವ ತುಪ್ಪದಲ್ಲಿ ಹಂದಿ/ ಗೋವಿನ ಕೊಬ್ಬು, ಮೀನಿನ ಎಣ್ಣೆ ಮತ್ತು ಪಾಮ್ ಎಣ್ಣೆಯಂತಹ ಕಲಬೆರಕೆ ಇದೆ ಎಂಬುದು ಆರೋಪವಾಗಿತ್ತು. ಈ ಕುರಿತು ತನಿಖೆ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಖಲೆಯ ಲಡ್ಡು ಮಾರಾಟ: ತಿರುಪತಿ ಲಡ್ಡು ತಯಾರಿಕೆ ಕುರಿತು ಆರೋಪಗಳಿದ್ದರೂ ಸಹ ಲಡ್ಡುಗೆ ಇರುವ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 2025ರಲ್ಲಿ ತಿರುಪತಿಯಲ್ಲಿ ಲಡ್ಡು ಮಾರಾಟ ಶೇ 10ರಷ್ಟು ಏರಿಕೆ ಕಂಡಿದೆ.

ಹೌದು, 2025ರಲ್ಲಿ ತಿರುಪತಿಯಲ್ಲಿ 13.52 ಕೋಟಿ ಲಡ್ಡು ಮಾರಾಟವಾಗಿದೆ. 2024ಕ್ಕೆ ಹೋಲಿಕೆ ಮಾಡಿದರೆ 1.37 ಕೋಟಿ ಲಡ್ಡು ಹೆಚ್ಚು ಮಾರಾಟವಾಗಿದೆ ಎಂದು ಈಗ ದಾಖಲೆಗಳು ಹೇಳುತ್ತಿವೆ. ಅದರಲ್ಲೂ ಡಿಸೆಂಬರ್ 27ರಂದು ಒಂದೇ ದಿನ 5.1 ಕೋಟಿ ಲಡ್ಡು ಮಾರಾಟವಾಗಿದ್ದು, ಇದು ಒಂದೇ ದಿನ ಅತಿ ಹೆಚ್ಚು ಲಡ್ಡು ಮಾರಾಟದ ದಾಖಲೆಯಾಗಿದೆ.

ತಿರುಪತಿ ದೇವಾಲಯದ ಆಡಳಿತವನ್ನು ನೋಡಿಕೊಳ್ಳುವ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಲಡ್ಡು ಮಾರಾಟದ ದತ್ತಾಂಶವನ್ನು ಬಿಡುಗಡೆ ಮಾಡಿದೆ. 2024ರಲ್ಲಿ 12.15 ಕೋಟಿ ಲಡ್ಡು ಮಾರಾಟವಾಗಿತ್ತು. 2025ರಲ್ಲಿ 13.52 ಕೋಟಿ ಲಡ್ಡು ಮಾರಾಟವಾಗಿದೆ ಎಂದು ಹೇಳಿದೆ.

ಕೇವಲ ಲಡ್ಡು ಮಾರಾಟದಿಂದಲೇ ದೇವಾಲಯಕ್ಕೆ 2025ರಲ್ಲಿ 676 ಕೋಟಿ ರೂ. ಆದಾಯ ಬಂದಿದೆ ಎಂದು ಅಂದಾಜಿಸಲಾಗಿದೆ. ಲಡ್ಡು ತಯಾರಿಕೆ ಕಲಬೆರಕೆ ವಿವಾದದ ನಡುವೆಯೇ ತಿರುಪತಿ ಲಡ್ಡುಗೆ ಬೇಡಿಕೆ ಕಡಿಮೆಯಾಗಿಲ್ಲ.

2024ರಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಿತು. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದರು. ಅವರು ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರವು ಲಡ್ಡು ತಯಾರು ಮಾಡಲು ಕಲಬೆರಕೆ ತುಪ್ಪವನ್ನು ಬಳಕೆ ಮಾಡುತ್ತಿತ್ತು ಎಂದು ಗಂಭೀರ ಆರೋಪವನ್ನು ಮಾಡಿದರು.

ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದವರು ಲಡ್ಡು ಪ್ರಸಾದವನ್ನು ಸ್ವೀಕಾರ ಮಾಡುವ ಕಾರಣ ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಈ ವಿವಾದದ ಬಳಿಕ ದೇವಸ್ಥಾನವನ್ನು ಶುದ್ಧೀಕರಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು. ಇದು ಆಂಧ್ರ ಪ್ರದೇಶ ರಾಜಕೀಯದಲ್ಲಿ ಜಟಾಪಟಿಗೆ ಕಾರಣವಾಯಿತು.

ಟಿಟಿಡಿ ಮಾಹಿತಿ ಪ್ರಕಾರ ಪ್ರತಿದಿನ ಸುಮಾರು 3 ಲಕ್ಷ ಲಡ್ಡುಗೆ ಬೇಡಿಕೆ ಇರುತ್ತದೆ. ಸಾಲು ಸಾಲು ರಜೆಗಳು ಬಂದರೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು, ಲಡ್ಡು ಮಾರಾಟವೂ ಅಧಿಕವಾಗುತ್ತದೆ.

ತಿರುಪತಿ ದೇವಾಲಯದ ಲಡ್ಡು ಪ್ರಸಾದ ದೇವಾಲಯದ ಅಡುಗೆ ಕೋಣೆ ಪೊಟುವಿನಲ್ಲಿ ತಯಾರಾಗುತ್ತದೆ. ಮಾಹಿತಿ ಪ್ರಕಾರ ಲಡ್ಡು ತಯಾರು ಮಾಡಲು ದೇವಾಲಯಕ್ಕೆ ಪ್ರತಿದಿನ 42 ಸಾವಿರ ಕೆಜಿ ತುಪ್ಪ, 22,500 ಕೆಜಿ ಗೋಡಂಬಿ, 15 ಸಾವಿರ ಕೆಜಿ ದ್ರಾಕ್ಷಿ ಅಗತ್ಯವಿದೆ. ತಿರುಪತಿ ಲಡ್ಡು ವಿಶಿಷ್ಟ ಸ್ವಾದದ ಕಾರಣ ‘ಜಿಐ’ ಟ್ಯಾಗ್ ಸಹ ಹೊಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular