HomeIndiaBIG NEWS: ತಿರುಪತಿಯಲ್ಲಿ ಮತ್ತೊಂದು ದುರಂತ: ಮಹಡಿಯಿಂದ ಬಿದ್ದು ಬಾಲಕ ಸಾವು

BIG NEWS: ತಿರುಪತಿಯಲ್ಲಿ ಮತ್ತೊಂದು ದುರಂತ: ಮಹಡಿಯಿಂದ ಬಿದ್ದು ಬಾಲಕ ಸಾವು

ತಿರುಪತಿ: ತಿರುಪತಿಯಲ್ಲಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿವೆ. ಕಾಲ್ತುಳಿತ ಘಟನೆಯಲ್ಲಿ 6 ಭಕ್ತರು ಸಾವು ಘಟನೆ ಬಳಿಕ ಲಡ್ಡು ವಿತರಣಾ ಕೌಂಟರ್ ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಎಲ್ಲಾ ಘಟನೆಗಳು ಮಾಸುವ ಮುನ್ನವೇ ಮಹಡಿಯಿಂದ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.

ತಿರುಪತಿಯಲಿ ಅತಿಥಿ ಗೃಹದಲ್ಲಿ 1ನೇ ಮಹಡಿ ಮೇಲಿಂದ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಟಿಟಿಡಿ ಸೌಲಭ್ಯದ ಮೊದಲ ಮಹಡಿಯಿಂದ ಬಾಲಕ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಮೂರು ವರ್ಷದ ಬಾಲಕ ಮೃತ ಬಾಲಕ.

ಕಡಪ ಜಿಲ್ಲೆಯ ಚಿನ್ನ ಚೌ ಗ್ರಾಮದಿಂದ ಬಂದಿದ್ದ ಕುಟುಂಬ, ದೇವರ ದರ್ಶನಕ್ಕೆಂದು ಆಗಮಿಸಿತ್ತು. ಟಿಟಿಡಿ ವ್ಯವಸ್ಥೆ ಮಾಡುತ್ತಿದ್ದ ಅತಿಥಿ ಗೃಹದಲ್ಲಿ ಉಳಿದುಕೊಂಡಿತ್ತು. ಬಾಲಕ ತನ್ನ ಸಹೋದರರ ಜೊತೆ ಆಟವಾಡುತ್ತಿದ್ದ. ಈ ವೇಳೆ ಪದ್ಮನಾಭ ನಿಲಯದಲ್ಲಿ ಮೆಟ್ಟಿಲುಗಳ ಗ್ರಿಲ್ ಮೂಲಕವಾಗಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದವನು ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular