HomeKarnatakaBIG NEWS: ಸರ್ಕಾರದ ಮುಂದೆ ನಾವು ಟಿಪ್ಪು ಜಯಂತಿ ಪ್ರಸ್ತಾಪ ಮಾಡಿಲ್ಲ : ಶಾಸಕ ತನ್ವೀರ್...

BIG NEWS: ಸರ್ಕಾರದ ಮುಂದೆ ನಾವು ಟಿಪ್ಪು ಜಯಂತಿ ಪ್ರಸ್ತಾಪ ಮಾಡಿಲ್ಲ : ಶಾಸಕ ತನ್ವೀರ್ ಸೇಠ್

ಮಂಡ್ಯ: ಟಿಪ್ಪು ಜಯಂತಿ ಹೆಸರಲ್ಲಿ ಜನರ ಮನಸು ಕೆಡಿಸುವ ಯತ್ನ ನಡೆದಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣದ ಗುಂಬಜ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಬೇಡ. ಸರ್ಕಾರದ ಮುಂದೆ ನಾವು ಟಿಪ್ಪು ಜಯಂತಿ ಪ್ರಸ್ತಾಪ ಇಟ್ಟಿಲ್ಲ. ಸರ್ಕಾರದ ಟಿಪ್ಪು ಜಯಂತಿ ಆಚರಣೆ ವಿರುದ್ಧ ನಾನು ಇದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಆಚರಣೆ ನಾವು ಮಡಿಕೊಳ್ಳುತ್ತೇವೆ. ನಮ್ಮ ಕಾರ್ಯಕ್ಕೆ ರಾಜ್ಯ ಸರ್ಕಾರ ಬೆಂಬಲ ಕೊಡುವುದು ಬೇಡ. ಟಿಪ್ಪು ಜಯಂತಿ ಮಾಡಲ್ಲ ಅಂದಾಗಲೂ ಸ್ವಾಗತ ಮಾಡಿದ್ದೇವೆ. ಜನರ ಮಧ್ಯೆ ವೈಮನಸ್ಸು ಉಂಟುಮಾಡಲು ನಮಗೆ ಇಷ್ಟ ಇಲ್ಲ. ಟಿಪ್ಪು ಅನುಯಾಯಿಗಳಿಗೆ ಈ ಜಯಂತಿ ಮಾಡುವ ಶಕ್ತಿ ಇದೆ. ಟಿಪ್ಪು ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular