HomeKarnatakaBREAKING NEWS: ನಡೆದು ಹೊಗುತ್ತಿದ್ದವರ ಮೇಲೆ ಹರಿದ ಟಿಪ್ಪರ್ ಲಾರಿ: ಮಗು ಸೇರಿ ಇಬ್ಬರು ದುರ್ಮರಣ

BREAKING NEWS: ನಡೆದು ಹೊಗುತ್ತಿದ್ದವರ ಮೇಲೆ ಹರಿದ ಟಿಪ್ಪರ್ ಲಾರಿ: ಮಗು ಸೇರಿ ಇಬ್ಬರು ದುರ್ಮರಣ

ಬೆಂಗಳೂರು: ನಡೆದು ಹೋಗುತ್ತಿದ್ದ ಇಬ್ಬರ ಮೇಲೆ ಟಿಪ್ಪರ್ ಲಾರಿ ಹರಿದು ಮಗು ಹಾಗೂ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಗುಡ್ಡದಹಳ್ಳಿಯಲ್ಲಿ ನಡೆದಿದೆ.

ಹಾಲೋಬ್ಲಾಕ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ, ರಸ್ತೆಬದಿ ಟಿಪ್ಪರ್ ನಿಲ್ಲಿಸಿದ್ದ. ಆದರೆ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಏಕಾಏಕಿ ಚಲಿಸಿದ ಟಿಪ್ಪರ್ ಲಾರಿ, ರಸ್ತೆ ಬದಿ ನಡೆದು ಹೋಗುತ್ತಿದ್ದ ಮಗು ಹಾಗೂ ವ್ಯಕ್ತಿಯ ಮೇಲೆ ಹರಿದು ಹೋಗಿದೆ. ಮಗು ಲಾರಿಯ ಚಕ್ರಕ್ಕೆ ಸಿಲುಕಿ ದೇಹ ಛಿದ್ರಛಿದ್ರವಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಟಿಪ್ಪರ್ ಲಾರಿ 8 ಬೈಕ್ ಗಳು ಹಾಗೂ 2 ಕಾರುಗಳಿಗೂ ಗುದ್ದಿದ್ದು, ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular