HomeAstroವೃತ್ತಿಯಲ್ಲಿ ಬಡ್ತಿ, ಇನ್ಕ್ರಿಮೆಂಟ್ ಬಯಸುವವರು ಮಾಡಿ ಈ ಕೆಲಸ

ವೃತ್ತಿಯಲ್ಲಿ ಬಡ್ತಿ, ಇನ್ಕ್ರಿಮೆಂಟ್ ಬಯಸುವವರು ಮಾಡಿ ಈ ಕೆಲಸ

ಪ್ರತಿಯೊಬ್ಬ ಉದ್ಯೋಗಿಯೂ ಇನ್ಕ್ರಿಮೆಂಟ್ ಹಾಗೂ ಬಡ್ತಿಯನ್ನು ಬಯಸುತ್ತಾನೆ. ಇದಕ್ಕಾಗಿ ವರ್ಷವಿಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತಾನೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬಹುತೇಕ ಕಂಪನಿಗಳು ಇನ್ಕ್ರಿಮೆಂಟ್ ಮಾಡ್ತವೆ. ಪ್ರತಿ ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ರೂ ಬಡ್ತಿ ಸಿಗ್ತಿಲ್ಲ ಎನ್ನುವವರು ಕೆಲ ಉಪಾಯಗಳ ಮೂಲಕ ಬಡ್ತಿ ಪಡೆಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆಯೂ ಹೇಳಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರ ಸ್ಟೀಲ್ ಬೀಗವನ್ನು ಖರೀದಿ ಮಾಡಿ ಮನೆಗೆ ತನ್ನಿ. ಅದನ್ನು ಮೊದಲು ನೀವೇ ತೆಗೆಯಬೇಕು. ಸರಿಯಾಗಿದೆಯೇ ಎಂದು ಪರೀಕ್ಷಿಸಲೂ ಅಂಗಡಿಯವನಿಗೆ ನೀಡಬೇಡಿ. ರಾತ್ರಿ ಮಲಗುವಾಗ ಆ ಬೀಗವನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಸ್ನಾನದ ನಂತರ  ಧಾರ್ಮಿಕ ಸ್ಥಳದಲ್ಲಿ ಅದನ್ನು ಇರಿಸಿ. ಯಾರಾದರೂ ಆ ಬೀಗವನ್ನು ತೆಗೆದ್ರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತು ಎಂದರ್ಥ. ಇದ್ರಿಂದ ನಿಮ್ಮ ವೃತ್ತಿ ಜೀವನದಲ್ಲಿ ಬಡ್ತಿ, ಇನ್ಕ್ರಿಮೆಂಟ್ ಕಾಣಬಹುದು.

ಶುಕ್ಲ ಪಕ್ಷದಲ್ಲಿ ಒಂದು ದಿನ ಬೆಳಿಗ್ಗೆ ಸ್ನಾನ ಮಾಡಿ, ಬಿಳಿ ಬಟ್ಟೆ ಧರಿಸಿ, ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಕುಳಿತು ಶ್ರೀ ಸೂಕ್ತವನ್ನು ಪಠಿಸಬೇಕು. ನಂತ್ರ ಹೂಗಳಿಂದ ತಾಯಿಯ ಪೂಜೆ ಮಾಡಬೇಕು. ಇದ್ರಿಂದ ಉದ್ಯೋಗದಲ್ಲಿ ಯಶಸ್ಸು ಕಾಣಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲಸದಲ್ಲಿ ಯಶಸ್ಸು ಸಿಗಬೇಕು, ಆರ್ಥಿಕ ಲಾಭವಾಗಬೇಕೆನ್ನುವವರು ಕೆಲಸಕ್ಕೆ ಹೊರಡುವ ಮೊದಲು ಮೊಸರು-ಸಕ್ಕರೆ ತಿನ್ನಬೇಕು. ಇದ್ರಿಂದ ನೀವು ಒಳ್ಳೆ ಸುದ್ದಿಯನ್ನು ಕೇಳ್ತೀರಿ.

For Latest News Updates, Join Our Whatsapp Community🚩
RELATED ARTICLES

Most Popular