HomeLatest Newsಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಸೇವಿಸಿ ಬದನೆ

ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಸೇವಿಸಿ ಬದನೆ

ತರಕಾರಿ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟ ನೇರಳೆ ಬಣ್ಣದ ಬದನೆಗಳನ್ನು ಕಂಡಾಗಲೇ ಬಾಯಲ್ಲಿ ನೀರೂರುತ್ತದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಹಾಗೂ ಇದು ದೇಹಾರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಬದನೆಯಲ್ಲಿ ನೀರಿನಂಶ ಹಾಗೂ ನಾರಿನಂಶ ಸಾಕಷ್ಟಿದ್ದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ದೂರಮಾಡುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುವ ಇದು ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. ಹೃದಯಕ್ಕೆ ಸರಾಗವಾಗಿ ರಕ್ತಸಂಚಾರವಾಗಲು ಅವಕಾಶ ಕಲ್ಪಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬದನೆಯಲ್ಲಿ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಲು ಇದನ್ನು ಅತ್ಯುತ್ತಮವಾಗಿ ಬಳಸಬಹುದು.

ರಕ್ತಹೀನತೆ ಸಮಸ್ಯೆ ಇರುವವರು ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಸೇವಿಸಿ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಿ ಮೂಳೆಗಳನ್ನು ದೃಢಪಡಿಸುತ್ತದೆ. ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಇದನ್ನು ಸೇವಿಸುವುದು ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular