HomeIndia5 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಮಗುವಿನ ಈ ವಿಡಿಯೋ.....!

5 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಮಗುವಿನ ಈ ವಿಡಿಯೋ…..!

ಮಕ್ಕಳು ಮತ್ತೆ ಆಹಾರ ಇವೆರಡೂ ವಿರುದ್ಧ ಪದಗಳಾಗಿವೆ. ಕಣ್ಮುಂದೆ ಅದೆಷ್ಟೇ ರುಚಿ ಆಹಾರವಿರಲಿ ಮಕ್ಕಳು ತಿನ್ನೋದಿಲ್ಲ. ಯಾವುದೇ ಸಮಾರಂಭಕ್ಕೆ ಪಾರ್ಟಿಗೆ ಮಕ್ಕಳೊಂದಿಗೆ ಹೋದಾಗ ಅಮ್ಮಂದಿರುವ ಪಡುವ ಕಷ್ಟ ಅಷ್ಟಿಷ್ಟಲ್ಲ. ವೆರೈಟಿ ಆಹಾರ ನೋಡುವ ಮಕ್ಕಳು ಯಾವುದನ್ನೂ ತಿನ್ನಲು ಮನಸ್ಸು ಮಾಡೋದಿಲ್ಲ. ಎಲ್ಲವೂ ಮುಗಿದು ಮನೆಗೆ ಹೊರಟಾಗ ಇಲ್ಲವೆ ಮನೆಗೆ ಬಂದ್ಮೇಲೆ ಅವರಿಗೆ ಹಸಿವಾಗುತ್ತದೆ.

ಈಗ ಅಂಥಹದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ತಾಯಿ ತನ್ನ ಮಗುವಿನೊಂದಿಗೆ ಪಾರ್ಟಿಗೆ ಬರ್ತಾಳೆ. ಪಾರ್ಟಿಯಲ್ಲಿ ಸಾಕಷ್ಟು ಆಹಾರವಿರುತ್ತದೆ. ಮೊದಲು ಕಲ್ಲಂಗಡಿ ಹಣ್ಣನ್ನು ಮಗಳಿಗೆ ತಾಯಿ ನೀಡ್ತಾಳೆ. ಮಗಳು ಬೇಡ ಎಂದು ತಲೆ ಅಲ್ಲಾಡಿಸುತ್ತಾಳೆ. ಆ ನಂತ್ರ ಖೀರ್‌, ಸೂಪ್‌, ಅನ್ನ, ಸ್ವೀಟ್‌ ಕಾರ್ನ್‌ ಹೀಗೆ ಒಂದಾದ್ಮೇಲೆ ಒಂದರಂತೆ ಅನೇಕ ಆಹಾರ ತೋರಿಸಿದ್ರೂ ಮಗಳು ಏನನ್ನೂ ತಿನ್ನೋದಿಲ್ಲ.

ಪಾರ್ಟಿ ಮುಗಿಸಿ ಮನೆಗೆ ಹೊರಡಲು ಮಹಿಳೆ ಸಿದ್ಧವಾಗ್ತಾಳೆ. ಕಾರ್‌ ನಲ್ಲಿ ಕುಳಿತು, ಸಂಬಂಧಿಕರಿಗೆ ಕೈ ಬೀಸುತ್ತಿರುತ್ತಾಳೆ. ಈ ವೇಳೆ ಅಲ್ಲಿದ್ದ ಮಗಳು ನನಗೆ ಹಸಿವಾಗಿದೆ ಎನ್ನುತ್ತಾಳೆ. ಇಷ್ಟು ಸಮಯ ನಗ್ತಿದ್ದ ತಾಯಿ ಮುಖದಲ್ಲಿ ನಗು ಮಾಯವಾಗುತ್ತದೆ. ಇನ್ಸ್ಟಾಗ್ರಾಮ್‌ ನಲ್ಲಿ ವೈರಲ್‌ ಆಗಿರುವ ಈ ವಿಡಿಯೋವನ್ನು ಈವರೆಗೆ 54 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular