HomeAstroಈ ಒಂದು ಉಪಾಯದಿಂದ ದೊರೆಯುತ್ತೆ ದೇವಾನುದೇವತೆಗಳ ಆಶೀರ್ವಾದ

ಈ ಒಂದು ಉಪಾಯದಿಂದ ದೊರೆಯುತ್ತೆ ದೇವಾನುದೇವತೆಗಳ ಆಶೀರ್ವಾದ

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು ಇದು ನೆರವಾಗುತ್ತದೆ.

ದೇವಾನುದೇವತೆಗಳನ್ನು ಆಕರ್ಷಿಸಲು ಹಾಗೂ ವಾಸ್ತು ದೋಷವನ್ನು ನಿವಾರಣೆ ಮಾಡಲು ಬೆಳಿಗ್ಗೆ-ಸಂಜೆ ಪೂಜೆ ಮಾಡಬೇಕು. ಪೂಜೆ ಜೊತೆಗೆ ಮನೆಯ ಎಲ್ಲ ಭಾಗಗಳಿಗೆ ಗಂಗಾ ಜಲವನ್ನು ಪ್ರೋಕ್ಷಣೆ ಮಾಡಿ. ಇದು ಮನೆಯ ಎಲ್ಲ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.

ದೇವರ ಮನೆಯಲ್ಲಿ ಸಂಜೆ ಹಾಗೂ ಬೆಳಿಗ್ಗೆ ಕರ್ಪೂರವನ್ನು ಹಚ್ಚಿ. ಕರ್ಪೂರದ ಸುವಾಸನೆ ದೇವಾನುದೇವತೆಗಳನ್ನು ಆಕರ್ಷಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯ ಮುಖ್ಯ ದ್ವಾರಕ್ಕೆ ಅಶೋಕದ ಎಲೆಯನ್ನು ಕಟ್ಟಿ. ಇದು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮನೆಯಲ್ಲಿ ವಾಸ್ತುದೋಷ ಯಂತ್ರವನ್ನು ಇಡಿ. ಯಂತ್ರದಿಂದ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಮನೆ ಒಡೆಯದೆ ವಾಸ್ತು ದೋಷ ಪರಿಹಾರ ಯಂತ್ರದಿಂದ ದೋಷ ಕಡಿಮೆ ಮಾಡಬಹುದು.

ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಶ್ರೀ ಯಂತ್ರವನ್ನು ದೇವರ ಮನೆಯಲ್ಲಿಡಿ.

For Latest News Updates, Join Our Whatsapp Community🚩
RELATED ARTICLES

Most Popular