HomeBeautyಮೃದುವಾದ, ಗುಲಾಬಿ ಬಣ್ಣದ ತುಟಿ ಪಡೆಯಲು ಸಾಕು ಮನೆಯಲ್ಲೇ ಇರುವ ಈ ಒಂದು ವಸ್ತು

ಮೃದುವಾದ, ಗುಲಾಬಿ ಬಣ್ಣದ ತುಟಿ ಪಡೆಯಲು ಸಾಕು ಮನೆಯಲ್ಲೇ ಇರುವ ಈ ಒಂದು ವಸ್ತು

ತುಟಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ತುಟಿಗಳು ಗುಲಾಬಿ ಬಣ್ಣದಲ್ಲಿ ಆಕರ್ಷಕವಾಗಿರಬೇಕೆಂದು ಹುಡುಗ, ಹುಡುಗಿ ಎಲ್ಲರೂ ಬಯಸ್ತಾರೆ. ಆಕರ್ಷಕ ತುಟಿ ಪಡೆಯಲು ಬ್ಯೂಟಿ ಪಾರ್ಲರ್ ಸುತ್ತುವವರ ಸಂಖ್ಯೆ ಕಡಿಮೆಯೇನಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಲಿಪ್ಸ್ಟಿಕ್ ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನು ಬಳಸಿ ತುಟಿ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ತಾರೆ.

ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಕ್ಕಿಂತ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ನಿಮ್ಮ ತುಟಿಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮೃದು ಹಾಗೂ ಕೋಮಲ ತುಟಿಗಳಿಗಾಗಿ ನೀವು ಸ್ವಲ್ಪ ಟೂತ್ಪೇಸ್ಟ್ ತೆಗೆದುಕೊಂಡು ತುಟಿಗಳಿಗೆ ಹಚ್ಚಿ. ಎರಡು ನಿಮಿಷಗಳ ಕಾಲ ಕೈ ಬೆರಳಿನ ಸಹಾಯದಿಂದ ತುಟಿಗಳ ಮೇಲೆ ಮಸಾಜ್ ಮಾಡಿ. ನಂತ್ರ ಟೂತ್ಪೇಸ್ಟ್ ಸಹಾಯದಿಂದ ತುಟಿಗಳನ್ನು ನಿಧಾನವಾಗಿ ಉಜ್ಜಿ.

ಹೀಗೆ ಮಾಡಿದಾಗ ತುಟಿಗಳ ಮೇಲಿರುವ ಡೆಡ್ ಸ್ಕಿನ್ ಕಡಿಮೆಯಾಗುತ್ತದೆ. ಒಂದು ವಾರಗಳ ಕಾಲ ಪ್ರತಿದಿನ ಇದನ್ನು ಮಾಡುತ್ತ ಬಂದಲ್ಲಿ ನಿಮಗೆ ಇದ್ರ ಫಲಿತಾಂಶ ಗೊತ್ತಾಗುತ್ತದೆ. ತುಟಿಗಳು ಮೃದುವಾಗಿ ಗುಲಾಬಿ ಬಣ್ಣ ಪಡೆಯುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular