HomeLifestyleಆರೋಗ್ಯಕ್ಕೆ ಹಿತಕರ ಈ ʼಲಡ್ಡು’

ಆರೋಗ್ಯಕ್ಕೆ ಹಿತಕರ ಈ ʼಲಡ್ಡು’

ಈಗ ವರ್ಷ ಮೂವತ್ತು ದಾಟುತ್ತಿದ್ದಂತೆ ಎಲ್ಲರಿಗೂ ಕಾಲು ಗಂಟು ನೋವು, ಬೆನ್ನುನೋವು, ನಿಶಕ್ತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಲ್ಲಿ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಲು ಆರೋಗ್ಯಕರವಾದ ಲಡ್ಡು ಇದೆ. ಒಮ್ಮೆ ಮಾಡಿ ನೋಡಿ. ಮಾಡುವುದು ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

½ ಕಪ್ – ಬೆಲ್ಲ, ½ ಕಪ್ – ಎಳ್ಳು, ½ ಕಪ್ – ವಾಲ್ ನಟ್, 2 ಚಮಚದಷ್ಟು ತುಪ್ಪ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಎಳ್ಳನ್ನು ಒಂದು ಪ್ಯಾನ್ ಗೆ ಹಾಕಿ ಗ್ಯಾಸ್ ಮೇಲೆ ಇಟ್ಟು ಸ್ವಲ್ಪ ಹುರಿದುಕೊಳ್ಳಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಂತರ ಅದಕ್ಕೆ ವಾಲ್ ನಟ್ ಹಾಕಿ ಪುಡಿ ಮಾಡಿಕೊಂಡು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿಮಾಡಿ ಬೌಲ್ ಗೆ ಹಾಕಿ.

ನಂತರ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿ. ದಿನಕ್ಕೊಂದು ಉಂಡೆ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ.

For Latest News Updates, Join Our Whatsapp Community🚩
RELATED ARTICLES

Most Popular