HomeBeautyಸೊಂಪಾದ ಕೂದಲಿಗೆ ಸಹಾಯಕ ಈ ಸೊಪ್ಪು

ಸೊಂಪಾದ ಕೂದಲಿಗೆ ಸಹಾಯಕ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ.

ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ ಯಾವುದೇ ಶ್ಯಾಂಪೂಗಳೂ, ಹೇರ್ ಪ್ಯಾಕ್ ಗಳೂ ಪ್ರಯೋಜನ ನೀಡುವುದಿಲ್ಲ ಎಂದು ಬೇಸರಿಸುತ್ತೀರಾ. ಪಾಲಕ್ ಸೊಪ್ಪಿನ ಹೇರ್ ಪ್ಯಾಕ್ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಕಪ್ ಪಾಲಕ್ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ತೆಂಗಿನೆಣ್ಣೆ ಬೆರೆಸಿ. ತಲೆಗೆ ದಪ್ಪನಾಗಿ ಹಚ್ಚಿಕೊಳ್ಳಿ. ಕೂದಲ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಲು ಮರೆಯದಿರಿ.

ನೆತ್ತಿಗೆ ದಪ್ಪವಾಗಿ ಹಚ್ಚಿ. 30 ನಿಮಿಷ ಬಳಿಕ ಕೂದಲನ್ನು ತೊಳೆಯಿರಿ. ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದು ಒಳ್ಳೆಯದು. ಜೇನುತುಪ್ಪ ಹಾಗೂ ಎಣ್ಣೆ ಕೂದಲಿಗೆ ಪೋಷಕಾಂಶ ಒದಗಿಸುತ್ತದೆ. ಮತ್ತು ತೇವಾಂಶವನ್ನು ಹಿಡಿದಿಡುತ್ತದೆ. ಕೂದಲ ಹಾನಿಯನ್ನೂ ಸರಿಪಡಿಸಿ ಪೋಷಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular