HomeBeautyತಕ್ಷಣ ಬೆಳ್ಳಗಾಗಲು ಹಚ್ಚಿ ಮನೆಯಲ್ಲೇ ತಯಾರಿಸಬಹುದಾದ ಈ ಫೇರ್ ನೆಸ್ ಫೇಸ್ ಪ್ಯಾಕ್

ತಕ್ಷಣ ಬೆಳ್ಳಗಾಗಲು ಹಚ್ಚಿ ಮನೆಯಲ್ಲೇ ತಯಾರಿಸಬಹುದಾದ ಈ ಫೇರ್ ನೆಸ್ ಫೇಸ್ ಪ್ಯಾಕ್

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ, ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಹಾಗಾಗಿ ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ನ್ನು ಬಳಸಿ.

ಡ್ರೈ ಸ್ಕಿನ್ ಹೊಂದಿರುವವರ ಚರ್ಮದಲ್ಲಿ ತೇವಾಂಶವಿರುವುದಿಲ್ಲ. ಹಾಗಾಗಿ ಮುಖದಲ್ಲಿ ಹೊಳಪು ಇರುವುದಿಲ್ಲ. ಈ ಸ್ಕಿನ್ ನಲ್ಲಿ ಸುಕ್ಕುಗಳು, ಗೆರೆಗಳು ಎದ್ದು ಕಾಣುತ್ತವೆ. ಹಾಗಾಗಿ ಡ್ರೈ ಸ್ಕಿನ್ ಹೊಂದಿರುವವರ ಸ್ಕಿನ್ ಬೆಳ್ಳಗಾಗಿ ಹೊಳಪಿನಿಂದ ಕೂಡಿರಲು ಅವರ ಚರ್ಮಕ್ಕೆ ತೇವಾಂಶ ಒದಗಿಸುವ ನೈಸರ್ಗಿಕ ಪದಾರ್ಥಗಳನ್ನು ಬಳಸಬೇಕಾಗುತ್ತದೆ. ಹಾಗಾಗಿ ಡ್ರೈ ಸ್ಕಿನ್ ಹೊಂದಿರುವವರು ಈ ಫೇಸ್ ಪ್ಯಾಕ್ ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2 ಚಿಟಿಕೆ ಕೇಸರಿ, ½ ಚಮಚ ಕೆಂಪು ಶ್ರೀಗಂಧದ ಪುಡಿ, 2 ಚಮಚ ಹಾಲಿನ ಕೆನೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಹಾಗೇ 3 ಚಮಚ ಆಲಿವ್ ಆಯಿಲ್, 1 ಚಮಚ ನಿಂಬೆ ರಸ, ಕೆಲವು ಹನಿ ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular