HomeHealthರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಸುಲಭವಾಗಿ ಮಾಡಬಹುದಾದ ಈ ಕಷಾಯ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಸುಲಭವಾಗಿ ಮಾಡಬಹುದಾದ ಈ ಕಷಾಯ

 ಕೊರೊನಾ ವೈರಸ್ ಕಾರಣದಿಂದ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತವಾದ ಚಿಂತೆ ಕಾಡುತ್ತಿದೆ. ಹಾಗೇ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ.

ಇಲ್ಲಿ ಸುಲಭವಾಗಿ ಮಾಡಬಹುದಾದ ಒಂದು ಕಷಾಯವಿದೆ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಹೆಚ್ಚಿಸುತ್ತದೆ.

5 – ಗರಿಕೆ ಹುಲ್ಲು, 5 – ದೊಡ್ಡಪತ್ರೆ ಎಲೆ, ನೆಲನೆಲ್ಲಿ – 4 ಎಲೆ, ಪಾರಿಜಾತ ಎಲೆ – 3, ತುಳಸಿ – 10 ಎಲೆ. 2 – ಏಲಕ್ಕಿ, 4 – ಲವಂಗ, ಸಣ್ಣ ಪೀಸ್ ಚಕ್ಕೆ, 6 – ಕಾಳುಮೆಣಸು, ಒಣಶುಂಠಿ – ಸಣ್ಣತುಂಡು, 1 ಚಮಚ – ಜೀರಿಗೆ, 1 ಚಮಚ – ಧನಿಯಾ. ಸೋಂಪು – ಚಿಟಿಕೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲಿಗೆ ಎಲೆಗಳನ್ನೆಲ್ಲಾ ಚೆನ್ನಾಗಿ ತೊಳೆದು ಎತ್ತಿಟ್ಟುಕೊಳ್ಳಿ. ನಂತರ ಉಳಿದ ಸಾಮಾಗ್ರಿಗಳನ್ನು ಒಂದು ಕಲ್ಲಿಗೆ ಹಾಕಿ ಚೆನ್ನಾಗಿ ಕುಟ್ಟಿಕೊಳ್ಳಿ.

ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಗ್ಲಾಸ್ ನೀರು ಹಾಕಿ ಅದು ಬಿಸಿಯಾಗುತ್ತಲೇ ಅರಿಶಿನ ಹಾಕಿ ನಂತರ ಗರಿಕೆ, ಪಾರಿಜಾತ, ದೊಡ್ಡಪತ್ರೆ ಎಲೆ, ನೆಲನೆಲ್ಲಿ, ತುಳಸಿ ಹಾಕಿ ಕುದಿಸಿ ನಂತರ ಕುಟ್ಟಿಕೊಂಡ ಪುಡಿ ಹಾಕಿ ಅರ್ಧ ಲಿಂಬೆಹಣ್ಣನ್ನು ಹಾಕಿ ಇದು ಚೆನ್ನಾಗಿ ಕುದಿಯಲಿ. ನಂತರ ಬೆಲ್ಲ ಸೇರಿಸಿ. 1 ಗ್ಲಾಸ್ ನೀರು ಅರ್ಧ ಗ್ಲಾಸ್ ಆಗುವವರೆಗೆ ಕುದಿಸಿ ಗ್ಯಾಸ್ ಆಫ್ ಮಾಡಿ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಸಮಯ ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular