HomeInternationalಪ್ಯಾರಿಸ್ ಹೊತ್ತಿ ಉರಿಯುತ್ತಿರುವ ನಡುವೆಯೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಜೋಡಿಯ ವಿಡಿಯೋ ವೈರಲ್

ಪ್ಯಾರಿಸ್ ಹೊತ್ತಿ ಉರಿಯುತ್ತಿರುವ ನಡುವೆಯೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಜೋಡಿಯ ವಿಡಿಯೋ ವೈರಲ್

ಪಿಂಚಣಿಗೆ ಅರ್ಹವಾಗುವ ವಯೋಮಾನದ ಕುರಿತಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕಳೆದ ಕೆಲ ದಿನಗಳಿಂದ ಗದ್ದಲದ ವಾತಾವರಣ ಮೂಡಿದೆ. ಆದರೆ ಈ ಜೋಡಿಗೆ ಈ ಎಲ್ಲ ಗಲಾಟೆಯ ಬಗ್ಗೆ ಯಾವುದೇ ಚಿಂತೆ ಇದ್ದಂತೆ ಕಾಣುತ್ತಿಲ್ಲ.

ಪ್ಯಾರೀಸ್ ಬೀದಿಗಳ ಹಿನ್ನೆಲೆಯಲ್ಲಿ ಉರಿಯುತ್ತಿದ್ದ ವೇಳೆಯಲ್ಲೇ ಈ ಅನಾಮಧೇಯ ಜೋಡಿಯೊಂದು ರೆಸ್ಟೋರೆಂಟ್ ಒಂದರ ಹೊರಗೆ ಕುಳಿತು ಆರಾಮವಾಗಿ ಹರಟುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಸುದ್ದಿಯಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಪ್ಯಾರಿಸ್‌ನಲ್ಲಿ ಪ್ರತಿಯೊಂದು ಹಸದೂ ಚಂದ,” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ.

ತಮ್ಮ ಬಳಿಯೇ ಅಷ್ಟೆಲ್ಲಾ ಗದ್ದಲಗಳಾಗುತ್ತಿದ್ದರೂ ಸಹ ತಾವು ಅದಕ್ಕೆ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿರುವ ಈ ಜೋಡಿಯ ವಿಡಿಯೋಗೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದೇ ವಿಡಿಯೋ ಈಗ ಮೀಮ್‌ಗಳಿಗೆ ಆಹಾರವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular