HomeAutoVideo | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ.

ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು ಆಟೋರಿಕ್ಷಾಕ್ಕೆ ಸಂಬಂಧಿಸಿದ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ಪ್ರಕಾಶಮಾನವಾದ ಗುಲಾಬಿ ಬಣ್ಣದ ಆಟೋ ರಿಕ್ಷಾದ ಪಕ್ಕದಲ್ಲಿ ವ್ಯಕ್ತಿಯೊಬ್ಬ ನಿಂತಿರುವುದನ್ನು ತೋರಿಸುತ್ತದೆ. ವಾಹನದ ಹೊರಭಾಗವು ಗುಲಾಬಿ ಬಣ್ಣದ್ದಾಗಿದ್ದರೆ, ಒಳಭಾಗವು ಬಿಳಿಯ ಬಣ್ಣ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆ ವ್ಯಕ್ತಿ ಆಟೋದೊಳಗೆ ಕೆಲವು ಬಟನ್​ ಅಳವಡಿಸಿದ್ದಾನೆ. ಯಾವುದೋ ಬಟನ್​ ಒತ್ತಿದರೆ ಕನ್ವರ್ಟಿಬಲ್ ಕಾರಿನಲ್ಲಿರುವಂತೆಯೇ ಆಟೋದ ಮೇಲ್ಛಾವಣಿಯು ತೆರೆದುಕೊಳ್ಳುತ್ತದೆ, ಇನ್ನೊಂದು ಬಟನ್​ ಒತ್ತಿದಾಗ ಅದು ಹಿಂದಕ್ಕೆ ಮಡಚಿಕೊಳ್ಳುತ್ತದೆ. ಅದರ ಸೀಟುಗಳೂ ಬೆಲೆಬಾಳುವಂತೆ ಕಾಣುತ್ತಿವೆ. ಅಷ್ಟೇ ಅಲ್ಲದೇ ಆಟೋ-ರಿಕ್ಷಾವು ವಿಶಿಷ್ಟವಾದ ಅಡ್ಡ ದೀಪಗಳನ್ನು ಹೊಂದಿದೆ, ಹಿಂಬದಿಯ ಕನ್ನಡಿಗಳ ಕೆಳಗೆ ಇರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

https://youtu.be/lW-J4YQHGmA

For Latest News Updates, Join Our Whatsapp Community🚩
RELATED ARTICLES

Most Popular