HomeEntertainmentಆಗಸ್ಟ್ 18ಕ್ಕೆ ತೆರೆ ಕಾಣಲಿವೆ ಈ ಎರಡು ಸಿನಿಮಾಗಳು

ಆಗಸ್ಟ್ 18ಕ್ಕೆ ತೆರೆ ಕಾಣಲಿವೆ ಈ ಎರಡು ಸಿನಿಮಾಗಳು

ಇದೇ ತಿಂಗಳು ಆಗಸ್ಟ್ 18ರಂದು ಎರಡು ಮೋಸ್ಟ ಎಕ್ಸಪೆಕ್ಟೆಡ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ‘ಕ್ಷೇತ್ರಪತಿ’ ಹಾಗೂ ‘ಬ್ಯಾಂಗ್’ ‌ ಚಿತ್ರ ಒಂದೇ ದಿನದಂದು ರಾಜ್ಯದ್ಯಂತ ತೆರೆ ಮೇಲೆ ಅಪ್ಪಳಿಸಲಿದ್ದು. ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಶ್ರೀಕಾಂತ್ ಕಟಗಿ ನಿರ್ದೇಶನದ ನವೀನ್ ಶಂಕರ್ ಹಾಗೂ  ಅರ್ಚನಾ ಜೋಯಿಸ್ ಮುಖ್ಯ ಭೂಮಿಕೆಯಲ್ಲಿರುವ ‘ಕ್ಷೇತ್ರಪತಿ’ ಸಿನಿಮಾ ತನ್ನ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿದೆ. ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್ ಈ ಚಿತ್ರದಲ್ಲಿ ಭೂಮಿಕಾ ಎಂಬ ಪತ್ರಕರ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.‌ ರಾಹುಲ್​ ಐನಾಪುರ್, ನಾಟ್ಯ ರಂಗ, ಅಚ್ಯುತ್​ ಕುಮಾರ್, ಹರ್ಷ ಅರ್ಜುನ್,  ಶೈಲಶ್ರೀ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗ್ಯಾಂಗ್ಸ್ಟರ್ ಕಥಾ ಹಂದರ ಹೊಂದಿರುವ ‘ಬ್ಯಾಂಗ್’ ಚಿತ್ರ ಸದ್ಯ ಟ್ರೆಂಡಿಂಗ್ ನಲ್ಲಿದೆ. ಶಾನ್ವಿ ಶ್ರೀವಾತ್ಸವ್ ಹಾಗೂ ರಘು ದೀಕ್ಷಿತ್‌, ತಂದೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುನಿಲ್ ಗುಜ್ಜರ್, ಜಹಾಂಗೀರ್, ನಾಗೇಂದ್ರ, ಸಾತ್ವಿಕ, ನಾಟ್ಯ ರಂಗ ಬಣ್ಣ ಹಚ್ಚಿದ್ದಾರೆ. ಯುಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತ್ ಕುಮಾರ್ ಬಂಡವಾಳ ಹೂಡಿದ್ದು, ರಿತ್ವಿಕ್ ಮುರಳಿಧರನ್ ಸಂಗೀತ ಸಂಯೋಜನೆ ನೀಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular