ಇವರು ಕಪ್ಪು ದಾರವನ್ನು ಕಾಲಿಗೆ ಧರಿಸಬಾರದು ಯಾಕೆ ಗೊತ್ತಾ…..?

ಬಹುತೇಕ ಜನರು ತಮ್ಮ ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಅಂದವಾಗಿ ಕಾಣಲು ದಾರ ಕಟ್ಟಿಕೊಂಡ್ರೆ ಮತ್ತೆ ಕೆಲವರು ದೃಷ್ಟಿ ಬೀಳದಂತೆ ದಾರ ಕಟ್ಟಿಕೊಳ್ತಾರೆ. ಕಪ್ಪುದಾರ ದುಷ್ಟ ಶಕ್ತಿ, ವಕ್ರ ಕಣ್ಣು ಹಾಗೂ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಆದರೆ ಎಲ್ಲರೂ ಕಪ್ಪು ದಾರವನ್ನು ಧರಿಸಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡು ರಾಶಿಯ ಜನರು ಕಪ್ಪು ದಾರವನ್ನು ಧರಿಸಬಾರದು.

ವೃಶ್ಚಿಕ ರಾಶಿಯ ಅಧಿಪತಿ ಗ್ರಹ ಮಂಗಳ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಕಪ್ಪು ಬಣ್ಣದ ಬಳಕೆ ತುಂಬಾ ಅಶುಭ. ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಿದರೆ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಈ ರಾಶಿಯ ಜನರು ಕಪ್ಪು ಬಣ್ಣ ಹಾಗೂ ಕಪ್ಪು ದಾರದ ಬಳಕೆ ಮಾಡಬಾರದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಅಧಿಪತಿ ಮಂಗಳ. ಮಂಗಳನಿಗೆ ಕಪ್ಪು ಬಣ್ಣ ವಿರೋಧಿ ಬಣ್ಣವಾಗಿದ್ದು, ಈ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಿದರೆ ಅಶುಭ ಫಲ ಸಿಗುತ್ತದೆ. ಅಲ್ಲದೆ ಕಪ್ಪು ಬಣ್ಣದ ಬಳಕೆಯಿಂದ ಮನಸ್ಸಿನಲ್ಲಿ ಚಂಚಲತೆ, ವಿನಾಕಾರಣ ಖಿನ್ನತೆ ಮುಂತಾದ ಸಮಸ್ಯೆ  ಶುರುವಾಗುತ್ತದೆ. ಹಾಗಾಗಿ ಮೇಷ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು. ಮೇಷ ರಾಶಿಯವರಿಗೆ ಕೆಂಪು ಬಣ್ಣ  ಶುಭ.

ಕಪ್ಪು ದಾರ ಧರಿಸಿರುವ ಕೈಗೆ ಬೇರೆ ಬಣ್ಣದ ದಾರ ಧರಿಸಬೇಡಿ. ದೇವರ ಸನ್ನಿಧಿ ಅಥವಾ ಕ್ಷೇತ್ರ ಸ್ಥಳಗಳಲ್ಲಿ ಸಿಗುವ ದಾರವನ್ನು ಬಳಸಿ. ಶುಭ ದಿನದಂದು ದಾರ ಧರಿಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read