HomeCrimeಪೊಲೀಸರ ದಾಳಿ ವೇಳೆ 8 ಹುಡುಗಿಯರ ಮಧ್ಯೆ ಇದ್ದ ಹುಡುಗ....! ಒಳಗಿನ ದೃಶ್ಯ ಕಂಡು ಹೌಹಾರಿದ...

ಪೊಲೀಸರ ದಾಳಿ ವೇಳೆ 8 ಹುಡುಗಿಯರ ಮಧ್ಯೆ ಇದ್ದ ಹುಡುಗ….! ಒಳಗಿನ ದೃಶ್ಯ ಕಂಡು ಹೌಹಾರಿದ ಖಾಕಿ ಪಡೆ

ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ಪಟ್ಟಣದಲ್ಲಿರುವ ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ. ಈ ವೇಳೆ 8 ಯುವತಿಯರು ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ.

ನದಿಯ ತಪ್ಪಲಿನಲ್ಲಿರುವ ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇದರಲ್ಲಿ ಒಂದು ಸ್ಪಾದಿಂದ ಹುಡುಗರು ಮತ್ತು ಹುಡುಗಿಯರನ್ನು ಬಂಧಿಸಲಾಯಿತು. ಬಂಧಿತ ಆರೋಪಿಗಳು ಗಾಜಿಯಾಬಾದ್, ಪಂಜಾಬ್, ಜೈಪುರ, ಯುಪಿ, ಮುಂಬೈ, ಛತ್ತೀಸ್‌ಗಢ ಮತ್ತು ಕೋಲ್ಕತ್ತಾ ನಿವಾಸಿಗಳು ಎಂದು ಹೇಳಲಾಗಿದೆ. ದಾಳಿ ವೇಳೆ ಒಬ್ಬ ಹುಡುಗನೊಂದಿಗೆ ಎಂಟು ಹುಡುಗಿಯರು ಕೋಣೆಯಲ್ಲಿದ್ದು, ಪೊಲೀಸರು ಬಂದಾಗ ಒಳಗಿದ್ದ ದೃಶ್ಯ ಮುಜುಗರ ಹುಟ್ಟಿಸುವಂತಿತ್ತು.

ಸಿರೋಹಿ ರಾಜಸ್ಥಾನದ ಅತ್ಯಂತ ಚಿಕ್ಕ ಜಿಲ್ಲೆ ಎಂಬುದು ಗಮನಾರ್ಹ. ಆದರೆ ಈಗ ಅಲ್ಲಿಯೂ ವೇಶ್ಯಾವಾಟಿಕೆ ನಡೆಸುವ ಸ್ಪಾ ಸೆಂಟರ್‌ಗಳು ತೆರೆದಿವೆ. ಎರಡ್ಮೂರು ತಿಂಗಳ ಪ್ಯಾಕೇಜ್ ಹೆಸರಲ್ಲಿ ಆರೋಪಿಗಳು, ಹುಡುಗಿಯರನ್ನು ಸ್ಪಾ ಸೆಂಟರ್ ಗೆ ಕರೆಯುತ್ತಾರೆ. ಈ ಹುಡುಗಿಯರು ಬೇರೆ ಬೇರೆ ರಾಜ್ಯದವರು ಮಾತ್ರವಲ್ಲದೇ ಥಾಯ್ಲೆಂಡ್, ನೇಪಾಳದಂತಹ ದೇಶಗಳಿಂದ ಸಹ ಹುಡುಗಿಯರನ್ನು ಕರೆ ತಂದು ಅವರಿಗೆ ಹೆಚ್ಚಿನ ಹಣವನ್ನು ನೀಡಲಾಗುತ್ತದೆ ಜೊತೆಗೆ ಗ್ರಾಹಕರಿಂದ ಹೆಚ್ಚಿನ ಹಣವನ್ನು ಸಹ ತೆಗೆದುಕೊಳ್ಳಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯ ಮಸಾಜ್ ಸಮಯದಲ್ಲಿ ಯುವತಿಯರು ಈ ವಿಶೇಷ ಮಸಾಜ್ ಬಗ್ಗೆ ಮಾತನಾಡುತ್ತಿದ್ದು, ಯುವಕನಿಗೆ ಅರ್ಥವಾದಾಗ ಅವನನ್ನು ಬೇರೆ ಕೋಣೆಗೆ ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಲೆಕ್ಟರ್ ಟೀನಾ ದಾಬಿ ಕೂಡ ಸ್ಪಾ ಸೆಂಟರ್‌‌ ಗಳ ದಂಧೆ ಕುರಿತು ಬಹಿರಂಗಪಡಿಸಿದ್ದರು

ಸಿರೋಹಿಗೆ ಸಮೀಪದಲ್ಲಿರುವ ಬಾರ್ಮರ್ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಘಟನೆ ಬೆಚ್ಚಿ ಬೀಳಿಸುವಂತಿತ್ತು. ಕಲೆಕ್ಟರ್ ಟೀನಾ ದಾಬಿ ಈ ನಗರಕ್ಕೆ ಭೇಟಿ ನೀಡಿದ್ದು, ಸ್ಪಾ ಕೇಂದ್ರದ ಬಳಿ ತಮ್ಮ ವಾಹನ ನಿಲ್ಲಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಪಾ ಕೇಂದ್ರಕ್ಕೆ ಹೊರಗಿನಿಂದ ಬೀಗ ಹಾಕಿರುವುದು ಕಂಡುಬಂದಿದ್ದು, ಆದರೆ ಒಳಗೆ ಅನೇಕ ಯುವತಿಯರಿದ್ದರು. ನಂತರ ಬೀಗವನ್ನು ಸುತ್ತಿಗೆಯಿಂದ ಒಡೆದು ಒಳಗಿನಿಂದ ಎಲ್ಲಾ ಯುವತಿಯರನ್ನು ಪಾರು ಮಾಡಲಾಗಿತ್ತು. ಈ ವೇಳೆ ಅವರೊಂದಿಗೆ ಇಬ್ಬರು ಬಾಲಕರೂ ಸಿಕ್ಕಿಬಿದ್ದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular