HomeKarnatakaBREAKING : ಬಾಗಲಕೋಟೆಯಲ್ಲಿ ಕಳ್ಳರ ಹಾವಳಿಗೆ ಬೇಸತ್ತು ‘ಒನಕೆ ಓಬವ್ವ’ನ ಅವತಾರ ತಾಳಿದ ಮಹಿಳೆಯರು.!

BREAKING : ಬಾಗಲಕೋಟೆಯಲ್ಲಿ ಕಳ್ಳರ ಹಾವಳಿಗೆ ಬೇಸತ್ತು ‘ಒನಕೆ ಓಬವ್ವ’ನ ಅವತಾರ ತಾಳಿದ ಮಹಿಳೆಯರು.!

ಬಾಗಲಕೋಟೆ : ಕಳ್ಳರ ಹಾವಳಿ ತಡೆಯಲು ಮಹಿಳೆಯರು ‘ಒನಕೆ ಓಬವ್ವ’ನ ಅವತಾರ ತಾಳಿದ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದೆ.

ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಾತ್ರಿ ವೇಳೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ವೇಳೆ ಮನೆಗೆ ನುಗ್ಗುವ ಕಳ್ಳರು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ.

ಇದರಿಂದ ಬೇಸತ್ತ ಮಹಿಳೆಯರು ಸ್ವತಹ ತಾವೇ ದೊಣ್ಣೆಯನ್ನು ಹಿಡಿದು ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಪೊಲೀಸರು ಮಾಡಬೇಕಾದ ಕೆಲಸವನ್ನು ಸ್ವತಹ ಮಹಿಳೆಯರೇ ಮಾಡುತ್ತಿದ್ದು, ಮಹಿಳೆಯರ ಧೈರ್ಯಕ್ಕೆ ಗ್ರಾಮದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular