HomeEntertainment'ವಿಕಾಸ ಪರ್ವ' ಚಿತ್ರದ ವಿಡಿಯೋ ಹಾಡು ರಿಲೀಸ್

‘ವಿಕಾಸ ಪರ್ವ’ ಚಿತ್ರದ ವಿಡಿಯೋ ಹಾಡು ರಿಲೀಸ್

ಅನ್ಬು ಅರಸ್ ನಿರ್ದೇಶನದ ರೋಹಿತ್ ನಾಗೇಶ್ ಅಭಿನಯದ ‘ವಿಕಾಸ ಪರ್ವ’ ಚಿತ್ರದ ”ಪಯಣ ಶುರುವಾಗಿದೆ” ಎಂಬ ಮೆಲೋಡಿ ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಅನುರಾಧ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಮೈಂಡ್ ಥಾಟ್ಸ್ ಮೀಡಿಯಾ ಸಂಸ್ಥೆ ಸೇರಿದಂತೆ ಸಮೀರ್ ಹಾಗೂ ಎಚ್ಪಿ ನಾಗೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರೋಹಿತ್ ನಾಗೇಶ್, ಸ್ವಾತಿ,  ಅಶ್ವಿನ್ ಹಾಸನ್ ಹಾಗೂ ನಿಶ್ವಿತಾ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ್ ಕಲಾಲ್ ಸಂಕಲನ, ನವೀನ್ ಸುವರ್ಣ ಛಾಯಾಗ್ರಹಣ,  ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಧನು ಕುಮಾರ್ ಮತ್ತು ಜೈ ಮಾಸ್ಟರ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular