HomeLifestyle'ಕಿರಾತಕ 2' ಚಿತ್ರದ ವಿಡಿಯೋ ಹಾಡು ರಿಲೀಸ್

‘ಕಿರಾತಕ 2’ ಚಿತ್ರದ ವಿಡಿಯೋ ಹಾಡು ರಿಲೀಸ್

ಪ್ರದೀಪ್ ರಾಜ್ ನಿರ್ದೇಶನದ ಆರ್ ಕೆ ತೇಜಸ್ ಅಭಿನಯದ ‘ಕಿರಾತಕ 2’ ಚಿತ್ರದ ‘ನಂದಿನಿ ನಂದಿನಿ’ ಎಂಬ ವಿಡಿಯೋ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಪ್ರದ್ದಿಯೊತ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಬೈಂದೂರ್ ಕನ್ಸ್ಟ್ರಕ್ಷನ್ ಬ್ಯಾನರ್ ನಲ್ಲಿ ಎಂಬಿ ಬೈಂದೂರ್ ನಿರ್ಮಾಣ ಮಾಡಿದ್ದು, ಆರ್ ಕೆ ತೇಜಸ್, ಯಶ್ ಶೆಟ್ಟಿ ಮತ್ತು ಶಿವಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಅವರ ನೃತ್ಯ ನಿರ್ದೇಶನವಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣವಿದೆ.

ಮನು ಕಿರಂಗೂರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 2011ರಲ್ಲಿ ತೆರೆ ಕಂಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಇದರ ಮುಂದುವರೆದ ಭಾಗ  ‘ಕಿರಾತಕ 2’ ನಲ್ಲಿ ಆರ್ ಕೆ ತೇಜಸ್ ನಾಯಕನಟನಾಗಿ ಅಭಿನಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular