HomeEntertainmentಇಂದು ಬಿಡುಗಡೆಯಾಗಲಿದೆ 'ಜಂಬೂ ಸರ್ಕಸ್' ಚಿತ್ರದ ವಿಡಿಯೋ ಹಾಡು

ಇಂದು ಬಿಡುಗಡೆಯಾಗಲಿದೆ ‘ಜಂಬೂ ಸರ್ಕಸ್’ ಚಿತ್ರದ ವಿಡಿಯೋ ಹಾಡು

ಇತ್ತೀಚಿಗಷ್ಟೇ ತನ್ನ ಮೆಲೋಡಿ ಹಾಡಿನಿಂದ  ಗಾನಪ್ರಿಯರ ಗಮನ ಸೆಳೆದಿದ್ದ ಪವನ್ ತೇಜ್ ನಟನೆಯ  ‘ಜಂಬೂ ಸರ್ಕಸ್’ ಚಿತ್ರದ ಮತ್ತೊಂದು ಹಾಡು ಇಂದು  ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಎಂ ಡಿ ಶ್ರೀಧರ್ ನಿರ್ದೇಶನದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರವೀಣ್ ತೇಜ್ ಗೆ ಜೋಡಿಯಾಗಿ ಅಂಜಲಿ ಹನೀಶ್ ಅಭಿನಯಿಸಿದ್ದು, ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ ಸಿಧಹಯ್ಯ, ನಯನಾ, ಜಗಪ್ಪ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ನಲ್ಲಿ ಹೆಚ್ ಸಿ ಸುರೇಶ್ ನಿರ್ಮಾಣ ಮಾಡಿದ್ದಾರೆ. ಗಣನೇಶ್ ಮಾತಾಡ್ ಸಂಕಲನ, ಎವಿ ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ ಅವರ ಸಾಹಸ ನಿರ್ದೇಶನ, ರಘು ನಿಡವಳ್ಳಿ ಸಂಭಾಷಣೆ, ಎ ಹರ್ಷ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular